ವಿಜಯಪುರ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಿಂದಗಿ ತಾಲೂಕು ಘಟಕದ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಮುಖಂಡ ರವಿಕಾಂತ ನಾಯ್ಕೋಡಿ ಮೇಲಿನ ಹಲ್ಲೆ ಪ್ರಕರಣ: ಐವರ ಬಂಧನ... - vijayapura
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಿಂದಗಿ ತಾಲೂಕು ಘಟಕದ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ಪ್ರಕರಣ
ಬಂಧಿತರನ್ನು ಶಿಕ್ಷಕ ವೈ.ಸಿ.ಮಯೂರ, ಶಿವಾನಂದ ಸಿಂಗೆ, ಶ್ರೀಶೈಲ ಮದರಿ, ರಾಜು ಮೊಕಾಶಿ, ಗೋಪಾಲ ಚಲವಾದಿ ಎಂದು ಗುರುತಿಸಲಾಗಿದೆ. ಆ. 5 ರಂದು ಆಲಮೇಲ ರಸ್ತೆಯ ದಾಬಾದಲ್ಲಿ ಊಟಕ್ಕೆ ಬಂದಿದ್ದ ರವಿಕಾಂತ ನಾಯ್ಕೋಡಿ ಹಾಗೂ ಸ್ನೇಹಿತರ ಮೇಲೆ ತಲವಾರದಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಗೊಳಗಾದ ರವಿಕಾಂತ ನೀಡಿದ ದೂರಿನಂತೆ ಸಿಂದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ.
ಇನ್ನು ಘಟನೆಯ ಪ್ರಮುಖ ಆರೋಪಿ ಅನೀಲ ಬರಗಲ್, ಯುವರಾಜ ಎಂಬುವರು ತಲೆಮರೆಸಿಕೊಂಡಿದ್ದಾರೆ.