ಕರ್ನಾಟಕ

karnataka

ETV Bharat / state

ಲಿಂಬೆ ಹಣ್ಣಿನ ಬೆಲೆ ದಿಢೀರ್​ ಕುಸಿತ : ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

ಸುದೀರ್ಘ ಲಾಕ್​​​​​​ಡೌನ್​ ಬಳಿಕ ವಿಜಯಪುರ ಜಿಲ್ಲೆಯ ಲಿಂಬೆ ವ್ಯಾಪಾರ ಮತ್ತೆ ಪುನಾರಂಭವಾಗಿದೆ. ಈ ಬಾರಿ ಉತ್ತಮ ಮಳೆಯಾದ ಕಾರಣ ಬೆಳೆಯೂ ಚೆನ್ನಾಗಿ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಲಿಂಬೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Rapid fall in Lemon prices
ವಿಜಯಪುರ ಲಿಂಬೆ ಮಾರುಕಟ್ಟೆಯ ಮೇಲೆ ಲಾಕ್ ಡೌನ್​ ಪರಿಣಾಮ

By

Published : Jun 15, 2020, 1:46 PM IST

ವಿಜಯಪುರ : ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಲಿಂಬೆ ಹಣ್ಣು ಬೆಲೆ ದೀಢಿರ್ ಕುಸಿತ ಕಂಡಿದ್ದು, ಬೆಳಗಾರರ ಜೊತೆ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ದ್ರಾಕ್ಷಿ ಬಿಟ್ಟರೆ ಅತಿ ಹೆಚ್ಚು ಬೆಳೆಯುವ ಎರಡನೇ ತೋಟಗಾರಿಕೆ ಬೆಳೆ ಲಿಂಬೆ ಹಣ್ಣು. ಉತ್ತಮ ಮಳೆ ಬಂದಿರುವ ಕಾರಣ ಈ ಬಾರಿ ನಿರೀಕ್ಷೆಗೂ ಮೀರಿ ಲಿಂಬೆ ಬೆಳೆದಿದೆ. ಆದರೆ, ಲಾಕ್​​​​ಡೌನ್ ಲಿಂಬೆ ಮಾರುಕಟ್ಟೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದ್ದು, ಸದ್ಯ, 1 ಸಾವಿರ ಲಿಂಬೆ ಹಣ್ಣಿನ ಬ್ಯಾಗ್​ಗೆ 250 ರಿಂದ 350 ರೂ. ಮಾತ್ರ ಬೆಲೆ ಇದೆ. ಕಳೆದ ವರ್ಷ ಈ ವೇಳೆಗೆ 2 ರಿಂದ 3 ಸಾವಿರ ರೂ.ಗೆ 1000 ಲಿಂಬೆ ಹಣ್ಣು ಮಾರಾಟವಾಗುತ್ತಿತ್ತು. ಬೆಲೆ ಕುಸಿತದಿಂದ ಮಾರುಕಟ್ಟೆಗೆ ತಂದು ವ್ಯಾಪಾರ ಮಾಡಲಾಗದೇ ರೈತರು ಹೊಲದಲ್ಲಿ ಲಿಂಬೆ ಹಣ್ಣು ನಾಶ ಮಾಡುತ್ತಿದ್ದಾರೆ.

ಲಿಂಬೆ ಹಣ್ಣಿನ ಬೆಲೆ ದಿಢೀರ್​ ಕುಸಿತ

ಇಷ್ಟು ದಿನ ಲಾಕ್​​​​​​ಡೌನ್ ಇದ್ದ ಕಾರಣ ಲಾರಿಗಳು ಸಂಚರಿಸದೇ ಲಿಂಬೆ ರಫ್ತಿಗೆ ಅವಕಾಶವಿರಲಿಲ್ಲ. ಈಗ ಲಾಕ್​​​​​ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಲಿಂಬೆ ರಫ್ತು ಮಾಡಲಾಗುತ್ತಿದೆ. ದಲ್ಲಾಳಿಗಳಿಗೆ ಲಾಭವಾಗದಿದ್ದರೂ, ನಷ್ಟದ ಪ್ರಮಾಣ ಕಡಿಮೆ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಲಿಂಬೆ ಹಣ್ಣು ಬೆಳೆಯುವ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಲಿಂಬೆ ಬೆಳೆಗಾರರ ಹಿತ ಕಾಪಾಡಲು ರಾಜ್ಯ ಸರ್ಕಾರ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಇದರ ಅಧ್ಯಕ್ಷರಾಗಿದ್ದಾರೆ. ಆದರೆ, ಯಾವುದೇ ಅನುದಾನವಿಲ್ಲದೆ ಈ ಮಂಡಳಿ ಹೆಸರಿಗೆ ಮಾತ್ರ ಎಂಬಂತೆ ಆಗಿದೆ. ಆದ್ದರಿಂದ, ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಲಿಂಬೆ ಬೆಳೆಗಾರರು ಆಗ್ರಹಿಸಿದ್ದಾರೆ.

ABOUT THE AUTHOR

...view details