ಕರ್ನಾಟಕ

karnataka

'ನನ್ನ ತಂಟೆಗೆ ಬರಬೇಡಿ, ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ'

By

Published : Mar 2, 2021, 3:34 PM IST

ನಾನು‌ ಕೈ ಮುಗಿದು ಕೇಳುತ್ತೇನೆ, ನನ್ನ ತಂಟೆಗೆ ಬರಬೇಡಿ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ನನ್ನ ವಿರುದ್ಧ ಅನಾವಶ್ಯಕವಾಗಿ ಮಾತನಾಡಿದರೆ, ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಸಂಸದ ರಮೇಶ್​ ಜಿಗಜಿಣಗಿ ಅವರು ಪರೋಕ್ಷವಾಗಿ ಶಾಸಕ ಯತ್ನಾಳ್​ಗೆ ಎಚ್ಚರಿಕೆ ರವಾನಿಸಿದ್ದಾರೆ.

ramesh-gigajinagi
ಸಂಸದ ರಮೇಶ್​ ಜಿಗಜಿಣಗಿ

ವಿಜಯಪುರ: 'ನೋಡ್ರೀ ಸುಮ್ಮನೆ ನನ್ನ ಕೆಣಕಬೇಡ್ರೀ. ನಾನು ಯಾರ ತಂಟೆಗೇ ಹೋಗಲ್ಲ, ನನ್ನ ತಂಟೆಗೆ ಬಂದವರನ್ನ ಸುಮ್ಮನೆ ಬಿಡಲ್ಲ' ಎಂದು ಪರೋಕ್ಷವಾಗಿ ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವಿರುದ್ಧ ಸಂಸದ ರಮೇಶ್​ ಜಿಗಜಿಣಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಂಸದ ರಮೇಶ್​ ಜಿಗಜಿಣಗಿ ಎಚ್ಚರಿಕೆ

ನಗರದ ಇಬ್ರಾಹಿಂಪುರ ರೈಲ್ವೆ ನಿಲ್ದಾಣ ಆವರಣದಲ್ಲಿ ಇಬ್ರಾಹಿಂಪುರ ಲೆವೆಲ್ ಕ್ರಾಸಿಂಗ್ ಗೇಟ್ 80ರ ಬದಲಿಗೆ ನಿರ್ಮಿಸಿರುವ ಮೇಲ್ಸೇತುವೆ ಲೋಕಾರ್ಪಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ರಾಜಕಾರಣದಲ್ಲಿ ಕಳೆದ 45 ವರ್ಷಗಳಿಂದ ಇದ್ದೇನೆ. ಜಿಲ್ಲೆಯಲ್ಲಿ ಈಗ ರಾಜಕಾರಣ ಮಾಡುತ್ತಿರುವವರಿಗಿಂತ ಹಿರಿಯ ರಾಜಕಾರಣಿ ನಾನು. ಬಿ.ಎಂ. ಪಾಟೀಲ, ರಾಮಕೃಷ್ಣ ಹೆಗಡೆ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗಿದ್ದವರ ಜತೆ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ನನ್ನನ್ನು ಕೆಣಕುವವರು ಯಾರೆಂದು ಹೆಸರು ಹೇಳುವುದಿಲ್ಲ. ಅದು ಜಿಲ್ಲೆಯ ಜನತೆಗೆ ಗೊತ್ತಿದೆ. ಪದೇ ಪದೇ ನನ್ನನ್ನು ಕೆಣಕಿದರೆ ನಾನು ಸುಮ್ಮನಿರಲ್ಲ. ಹರಿಜನ ಅಂದರೆ ಅಷ್ಟು ಹಗುರಾನಾ? ಎಂದು ಕಿಡಿಕಾರಿದರು.

ಓದಿ:1 ರಿಂದ 5ನೇ ತರಗತಿ ಆರಂಭ ಯಾವಾಗ: ಸಚಿವರು ಹೇಳಿದ್ದೇನು?

ನಾನು‌ ಕೈ ಮುಗಿದು ಕೇಳುತ್ತೇನೆ, ನನ್ನ ತಂಟೆಗೆ ಬರಬೇಡಿ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ನನ್ನ ವಿರುದ್ಧ ಅನಾವಶ್ಯಕವಾಗಿ ಮಾತನಾಡಿದರೆ, ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಜಿಗಜಿಣಗಿ ಎಚ್ಚರಿಸಿದರು.

ABOUT THE AUTHOR

...view details