ವಿಜಯಪುರ: ಕಳೆದೊಂದು ವಾರದಿಂದ ಬಿಸಿಲಿನಿಂದ ತತ್ತರಿಸಿದ್ದ ಗುಮ್ಮಟ ನಗರಿಯಲ್ಲಿ ಇಂದು ಜಿಟಿ ಜಿಟಿ ಮಳೆಯಾಗುತ್ತಿದೆ.
ಗುಮ್ಮಟ ನಗರಿಯಲ್ಲಿ ಜಿಟಿ ಜಿಟಿ ಮಳೆ... ರೈತರ ಮೊಗದಲ್ಲಿ ಸಂತಸ - ವಿಜಯಪುರ ಲೇಟೆಸ್ಟ್ ನ್ಯೂಸ್
ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜಿಲ್ಲೆಗೆ ಮಳೆರಾಯನ ಆಗಮನವಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಗುಮ್ಮಟನಗರಿಯಲ್ಲಿ ಜಿಟಿ ಜಿಟಿ ಮಳೆ
ನಗರದ ಸ್ಟೇಷನ್ ರಸ್ತೆ, ಬಡೆ ಕಮಾನ್ ರಸ್ತೆ, ಗಣೇಶ ನಗರ, ಗೋಪಾಲಪುರ ಗಲ್ಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆ ಆರಂಭವಾಗಿದ್ದು, ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ರಸ್ತೆ ಬದಿಯಲ್ಲಿ ಆಸರೆ ಪಡೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಜಿಲ್ಲೆಯಾದ್ಯಂತ ರೈತರು ಬಿತ್ತನೆ ಕಾರ್ಯವನ್ನು ಮುಗಿಸಿದ್ದು, ಮಳೆರಾಯನ ಆಗಮನಕ್ಕಾಗಿ ಕಾಯುತ್ತಿದ್ದರು. ಇಂದು ಸುರಿದ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಮಳೆ ರಾತ್ರಿ ಕೂಡ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.