ವಿಜಯಪುರ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಟಾವಿಗೆ ಬಂದ ಕಬ್ಬಿನ ಬೆಳೆ ನೆಲಸಮಗೊಂಡ ಘಟನೆ ಇಂಡಿ ತಾಲೂಕಿನ ವಾಡೇ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ನೆಲಕಚ್ಚಿದ ಕಬ್ಬಿನ ಬೆಳೆ: ಸಂಕಷ್ಟದಲ್ಲಿ ರೈತ - ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ನೆಲಕ್ಕಚಿದ್ದ ಕಬ್ಬಿನ ಬೆಳೆ
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಯ ಪರಿಣಾಮ ಕಬ್ಬಿನ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ.
ಮಳೆಯಿಂದ ನೆಲಕ್ಕಚಿದ ಕಬ್ಬಿನ ಬೆಳೆ
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಯ ಪರಿಣಾಮ 3 ಎಕರೆ ಪ್ರದೇಶದಲ್ಲಿನ ಕಬ್ಬಿನ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ. ವಾಡೇ ಗ್ರಾಮದ ರೈತ ಪಂಡಿತ ನಾಗಪ್ಪ ಅವಟಿ ಎಂಬುವರಿಗೆ ಸೇರಿದ ಬೆಳೆಯಾಗಿದ್ದು, ಸಾಲ ಸೂಲ ಮಾಡಿ ವರ್ಷವಿಡೀ ಬೆಳೆದ ಬೆಳೆ ನೆಲಕ್ಕೆ ಉರಳಿದ್ದು ರೈತನ ಆತಂಕಕ್ಕೆ ಕಾರಣವಾಗಿದೆ.