ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಭಾಗ ಸೇರಿದಂತೆ ಇಂದು ಹಲವೆಡೆ ಮಳೆಯಾಗಿದೆ. ಕಳೆದ ಎರಡ್ಮೂರು ದಿನಗಳ ಹಿಂದೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಇಂದು ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಲಕ್ಷಣಗಳಿದ್ದವು. ಮಧ್ಯಾಹ್ನದ ನಂತರ ನಾಲತವಾಡದಲ್ಲಿ ಮಳೆ ಸುರಿದಿದ್ದು, ರೈತಾಪಿ ವರ್ಗದವರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಮುದ್ದೇಬಿಹಾಳದಲ್ಲಿ ಅಕಾಲಿಕ ಮಳೆ; ಆತಂಕದಲ್ಲಿ ಅನ್ನದಾತರು! - ಅಕಾಲಿಕ ಮಳೆ
ಈ ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ, ಜೋಳ, ಮೆಣಸಿಣಕಾಯಿ ಮೊದಲಾದ ಬೆಳೆಗಳಿಗೆ ಹಾನಿಯಾಗಲಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಒಂದು ವೇಳೆ ಇನ್ನೂ ಎರಡು ದಿನಗಳ ಕಾಲ ಬಿಟ್ಟು ಬಿಡದೇ ಮಳೆ ಸುರಿದರೆ ರೈತರ ಕೈಗೆ ಬಂದಿರುವ ತುತ್ತು ಬಾಯಿಗೆ ಬಾರದಂತಾಗುವ ಪರಿಸ್ಥಿತಿ ಎದುರಾಗಲಿದೆ.
ಮುದ್ದೇಬಿಹಾಳದಲ್ಲಿ ಅಕಾಲಿಕ ಮಳೆ; ಆತಂಕದಲ್ಲಿ ಅನ್ನದಾತರು!
ಈ ಸುದ್ದಿಯನ್ನೂ ಓದಿ:ಚಿಕ್ಕಮಗಳೂರು: ಕಾಫಿ ಕಟಾವಿನ ವೇಳೆ ಅಕಾಲಿಕ ಮಳೆ.. ಬೆಳೆಗಾರರಿಗೆ ಸಂಕಷ್ಟ