ವಿಜಯಪುರ: ನೆರೆ ಪೀಡಿತರ ಸಲುವಾಗಿ ಯತ್ನಾಳ ಹಾಗೂ ಮಾಧ್ಯಮದವರ ಹೇಳಿಕೆಯಿಂದಲೇ 1,200 ಕೋಟಿ ಬಂದಿದೆ. ಶ್ರೀಶೈಲ ಜಗದ್ಗುರು ಬಗ್ಗೆ ಮಾಜಿ ಸಚಿವರು ಹಗುರವಾಗಿ ಮಾತನಾಡಿದ್ದಾರೆ. ಶ್ರೀಶೈಲ ಜಗದ್ಗುರುಗಳೇ ಪತ್ರ ಬರೆದಿದ್ದಾರೋ ಅಥವಾ ಯಾರೋ ಬರೆಸಿದ್ದಾರೆ ಎಂದಿರುವುದು ಅಕ್ಷಮ್ಯ ಅಫರಾಧ. ಮಾಜಿ ಸಚಿವರು ಜಗದ್ಗುರುಗಳ ಹಾಗೂ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಆಗ್ರಹಿಸಿದ್ದಾರೆ.
ಜನಪ್ರತಿನಿಧಿಯಾಗಿ ಯತ್ನಾಳ ಅವರು ಮಾತನಾಡಿದ್ದಾರೆ. ಶೋಕಾಸ್ ನೋಟಿಸ್ ವಾಪಸ್ಸು ಪಡೆಯಬೇಕೆಂದು ಸ್ವಾಮಿ ವಿವೇಕಾನಂದ ಸೇನೆ ಹಾಗೂ ಯತ್ನಾಳ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಆಗ್ರಹಿಸುತ್ತೇವೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ವಿಜಯಪುರದ ರಸ್ತೆಗಳ ಬಗ್ಗೆ ಮಾಜಿ ಸಚಿವರು ಮಾತನಾಡಿದ್ದಾರೆ. 2004 ರಲ್ಲಿ ನಾವೆಲ್ಲರೂ ಸೇರಿ ಪ್ರಚಾರ ಮಾಡಿ ಗೆಲ್ಲಿಸಿದ್ದೆವು. 2008 ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು. ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದು ಅವರನ್ನು ಉಚ್ಚಾಟನೆ ಮಾಡಲು ನಾವು ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.