ಕರ್ನಾಟಕ

karnataka

By

Published : Jun 1, 2020, 3:18 PM IST

ETV Bharat / state

ಎಪಿಎಂಸಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ..

ಕಂಪನಿಗಳು ನೇರವಾಗಿ ರೈತರ ಬೆಳೆ ಖರೀದಿ ಮಾಡುವುರಿಂದ ಸ್ಪರ್ಧಾತ್ಮಕ ಬೆಲೆ ದೊರೆಯುವುದಿಲ್ಲ‌. ಕಾಯ್ದೆಯಿಂದ ಸರ್ಕಾರಕ್ಕೂ ಸಾವಿರಾರು ಕೋಟಿ ನಷ್ಟ ಉಂಟುಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

Protest
Protest

ವಿಜಯಪುರ :ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಸರ್ಕಾರ ಹಿಂಪಡೆಯುವಂತೆ ಒತ್ತಾಯಿಸಿ ಮರ್ಚೆಂಟ್‌ ಅಸೋಸಿಯೇಷನ್, ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆ ಒಕ್ಕೂಟಗಳು ಎಪಿಎಂಸಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವುರಿಂದ ಕೃಷಿಕ ಸಮುದಾಯ ನಷ್ಟ ಅನುಭವಿಸುವಂತಾಗುತ್ತದೆ‌. ಕಂಪನಿಗಳು ನೇರವಾಗಿ ರೈತರ ಬೆಳೆ ಖರೀದಿ ಮಾಡುವುರಿಂದ ಸ್ಪರ್ಧಾತ್ಮಕ ಬೆಲೆ ದೊರೆಯುವುದಿಲ್ಲ‌. ಕಾಯ್ದೆಯಿಂದ ಸರ್ಕಾರಕ್ಕೂ ಸಾವಿರಾರು ಕೋಟಿ ನಷ್ಟ ಉಂಟುಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಎಪಿಎಂಸಿ ಕಚೇರಿಯಲ್ಲಿ ಇ-ಟೆಂಡರ್ ಮೂಲಕ ವ್ಯವಹಾರವಾಗುತ್ತಿದೆ. ಹೀಗಾಗಿ ರೈತರಿಗೆ ಲಾಭಾಂಶ ಕೂಡ ಬರುತ್ತಿದೆ. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಹಾಗೂ ವರ್ತಕರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು‌.

ಎಪಿಎಂಸಿ ಮಾರುಕಟ್ಟೆ ನಂಬಿ ಜೀವನ ಕಟ್ಟಿಕೊಂಡ ಕೂಲಿಕಾರರು ಕೆಲಸ ಕಳೆದುಕೊಳ್ಳುತ್ತಾರೆ.‌ ಸರ್ಕಾರ ಜಾರಿ ಮಾಡಿದ ಕಾಯ್ದೆ ರದ್ದು ಪಡೆಸುವಂತೆ ಆಗ್ರಹಿಸಿ ಎಪಿಎಂಸಿ ಅಧಿಕಾರಿಗಳಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದರು.

ABOUT THE AUTHOR

...view details