ವಿಜಯಪುರ: ಹದಗೆಟ್ಟ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ದೇವರ ಹಿಪ್ಪರಗಿ ಗ್ರಾಮದ ಹಲವು ಗ್ರಾಮಸ್ಥರು ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ರಸ್ತೆ ದುರಸ್ತಿಗೆ ಭಿಕ್ಷೆ ಬೇಡಿ ಪ್ರತಿಭಟನೆ, ದಾನ ಕೊಟ್ಟ ಜೋಳದ ಹಿಟ್ಟು ಡಿಸಿಗೆ - ವಿನೂತನ
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಗ್ರಾಮದಲ್ಲಿ ಹದಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಮನೆ, ಮನೆಗೆ ತೆರಳಿ ಭಿಕ್ಷೆ ಬೇಡಿ ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು.
ಬಿ.ಬಿ.ಇಂಗಳಗಿ ಗ್ರಾಮದಿಂದ ದೇವರ ಹಿಪ್ಪರಗಿ ಪಟ್ಟಣದ ವರೆಗಿನ ಸುಮಾರು 25 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಡಿದ್ದು ಅದನ್ನು ದುರಸ್ತಿಗೊಳಿಸಲು ಹಲವು ಬಾರಿ ಮನವಿ ಮಾಡಿಕೊಂಡರು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಬಿ.ಇಂಗಳಗಿ, ಕೊಂಡಗೂಳಿ, ಹಂಚಲಿ ಗ್ರಾಮಗಳ ಜನರಿಂದ ಪ್ರತಿಭಟನೆ ಮಾಡಲಾಯಿತು.
ಭಜನೆ, ಕೀರ್ತನೆ ಹಾಡುತ್ತ ಮನೆಮನೆಗೆ ತೆರಳಿ ಬೊಗಸೆ ಜೋಳ ಭಿಕ್ಷೆ ಬೇಡುವ ಮೂಲಕ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿನೂತನ ಪ್ರತಿಭಟನೆಯಿಂದ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು. ಭಿಕ್ಷೆ ಬೇಡಿ ಸಂಗ್ರಹಿಸಿದ ಜೋಳವನ್ನು ಡಿಸಿ ಅವರಿಗೆ ಕೊಟ್ಟು ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಲಾಯಿತು.