ವಿಜಯಪುರ: ನಗರದ ಡಿಸಿಐಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 50 ಕೆಜಿ ಮಾವಾ ಮತ್ತು 120 ಕೆಜಿ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಷೇಧಿತ ಮಾವಾ ಮಾರುತ್ತಿದ್ದವರ ಬಂಧನ: 50 ಕೆಜಿ ಮಾವಾ, 120 ಕೆಜಿ ಕಚ್ಚಾ ವಸ್ತು ವಶ - vijayapura
ವಿಜಯಪುರ ನಗರದ ಡಿಸಿಐಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 50 ಕೆಜಿ ಮಾವಾ ಮತ್ತು 120 ಕೆಜಿ ಕಚ್ಚಾ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ವಿಜಯಪುರ ಡಿಸಿಐಬಿ ಇನ್ಸ್ಪೆಕ್ಟರ್ ಸಿ.ಬಿ. ಬಾಗೇವಾಡಿ ನೇತೃತ್ವದಲ್ಲಿ ಚಡಚಣ ಪಟ್ಟಣದಲ್ಲಿ ದಾಳಿ ನಡೆಸಿದ್ದು, ಚಡಚಣ ಪಟ್ಟಣದ ಆದರ್ಶ ನಗರ ಖೂಬಾ ಮಸೀದಿ ಪಕ್ಕದಲ್ಲಿ ಹುಸೇನಸಾಬ ಗುಲಾಬಸಾಬ್ ನದಾಫ್ ಎಂಬುವರಿಗೆ ಸೇರಿದ ಪತ್ರಾಸ್ ಶೆಡ್ ಮೇಲೆ ದಾಳಿ ನಡೆಸಲಾಗಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ತಂಬಾಕು ಮಿಶ್ರಿತ ನಿಷೇಧಿತ 13,950 ರೂ. ಮೌಲ್ಯದ 50 ಕೆಜಿ ಮಾವಾ ಹಾಗೂ 120 ಕೆಜಿ ಕಚ್ಚಾ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಚಡಚಣ ಪಟ್ಟಣದ ಸಲೀಂ ಸೈಫನಸಾಬ ನದಾಫ್ (27), ಚಡಚಣ ತಾಲೂಕಿನ ಹಾವಿನಾಳ ಗ್ರಾಮದ ರಾಘವೇಂದ್ರ ಬಂದಪ್ಪ ಐಹೊಳ್ಳೆ (22) ಎಂಬುವರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.