ವಿಜಯಪುರ:ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ವೊಂದು ಕೂಡಗಿ ಗ್ರಾಮದಲ್ಲಿನ ಎನ್ಟಿಪಿಸಿ ರೈಲು ಸೇತುವೆ ಕೆಳಗಡೆ 4 ಅಡಿ ನೀರಲ್ಲಿ ಸಿಲುಕಿಕೊಂಡ ಘಟನೆ ಕಳೆದ ರಾತ್ರಿ ನಡೆದಿದೆ.
ವಿಜಯಪುರದಲ್ಲೂ ಭಾರಿ ಮಳೆ: 4 ಅಡಿ ನೀರಿನಲ್ಲಿ ಸಿಲುಕಿದ ಕೆಎಸ್ಆರ್ಟಿಸಿ ಬಸ್ - Private bus caught in 4 feet of water
ವಿಜಯಪುರ ಜಿಲ್ಲೆಯಲ್ಲೂ ನಿನ್ನೆ ಭಾರಿ ಮಳೆ ಸುರಿದಿದೆ. ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ವೊಂದು ಕೂಡಗಿ ಗ್ರಾಮದಲ್ಲಿನ ಎನ್ಟಿಪಿಸಿ ರೈಲು ಸೇತುವೆ ಕೆಳಗೆ 4 ಅಡಿ ನೀರಲ್ಲಿ ಸಿಲುಕಿಕೊಂಡಿತ್ತು.
ರಾತ್ರಿ ವರುಣ ಅಬ್ಬರಿಸಿದ್ದು, ಎನ್ಟಿಪಿಸಿ ರೈಲು ಸೇತುವೆ ಕೆಳಗೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿತ್ತು. ಮಸುತಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನೀರಲ್ಲಿ ಸಿಲುಕಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಬಳಿಕ ಪ್ರಯಾಣಿಕರನ್ನ ಪರ್ಯಾಯ ವಾಹನದಲ್ಲಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು. ಮಧ್ಯರಾತ್ರಿವರೆಗೂ ಪರದಾಟ ನಡೆಸಿ, ಬಳಿಕ ಚಾಲಕ ಹಾಗೂ ನಿರ್ವಾಹಕ ಬಸ್ ಹೊರ ತೆಗೆದರು.
ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣವಾಗಿದೆ ಎಂಬ ಆರೋಪಗಳಿವೆ. ಮಳೆಯಾದ್ರೆ ಇಲ್ಲಿ ನೀರು ನಿಲ್ಲುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.