ವಿಜಯಪುರ: ಕೊರೊನಾ ವಿರುದ್ಧ ರಕ್ಷಣೆಗಾಗಿ ಬಳಸುವ ಪಿಪಿಇ ಕಿಟ್ ನಗರದ ರಸ್ತೆಯಲ್ಲಿ ಬಿದ್ದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ರಸ್ತೆಯಲ್ಲಿ ಪಿಪಿಇ ಕಿಟ್, ಅದರ ಮೇಲೆ ಕುಳಿತ ನಾಯಿ: ವಿಜಯಪುರದಲ್ಲಿ ಆತಂಕ - ರಸ್ತೆಯಲ್ಲಿ ಬಿದ್ದಿರುವ ಪಿಪಿಇ ಕಿಟ್
ವಿಜಯಪುರ ನಗರದ ರಸ್ತೆಯಲ್ಲಿ ಪಿಪಿಇ ಕಿಟ್ ಬಿದ್ದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ರಸ್ತೆ ಮೇಲೆಯೇ ಕಸ ವಿಲೇವಾರಿ ಸಿಬ್ಬಂದಿ ಪಿಪಿಇ ಕಿಟ್ ಎಸೆದು ಹೋಗಿದ್ದು, ಅದರ ಬಳಿಯೇ ವಾಹನ ಸವಾರರು, ಸಾರ್ವಜನಿಕರು ಹಾದು ಹೋಗುತ್ತಿರುವುದರಿಂದ ರೋಗ ಹರಡುವಿಕೆಗೆ ಕಾರಣವಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಬಳಿಕ ನಾಶ ಮಾಡಬೇಕಿದ್ದ ಕಿಟ್ಗಳು ನಗರದ ಶಾಪೇಟೆಯ ರಸ್ತೆಯಲ್ಲಿ ಕಂಡು ಬಂದಿದ್ದು, ಭೀತಿ ಹುಟ್ಟಿಸಿದೆ. ಪಿಪಿಇ ಕಿಟ್ ಉಪಯೋಗಿಸಿದ ಮೇಲೆ ಅದನ್ನು ನಿಯಮಾನುಸಾರ ಸುಟ್ಟು ನಾಶ ಮಾಡಬೇಕಾಗುತ್ತದೆ. ಆದರೆ ಕಸದ ವಾಹನದಲ್ಲಿ ಸಾಗಿಸುತ್ತಿದ್ದಾಗ ಪಿಪಿಇ ಕಿಟ್ ಕೆಳಗೆ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.
ರಸ್ತೆ ಮೇಲೆ ಬಿದ್ದಿದ್ದ ಪಿಪಿಇ ಕಿಟ್ ಮೇಲೆ ನಾಯಿ ಮರಿಯೊಂದು ಕುಳಿತು ಜನರಲ್ಲಿ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ನಾಯಿಯಿಂದ ವೈರಸ್ ಜನರಿಗೂ ಹರಡಬಹುದು ಎಂದು ಜನರು ಆತಂಕಗೊಂಡಿದ್ದಾರೆ. ಅಲ್ಲದೆ ಕೂಡಲೇ ಇಲ್ಲಿ ಬಿದ್ದಿರುವ ಪಿಪಿಇ ಕಿಟ್ಗಳನ್ನು ತೆಗೆದು ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.