ಮುದ್ದೇಬಿಹಾಳ(ವಿಜಯಪುರ): ಕೋವಿಡ್-19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ 14 ದಿನಗಳ ಕೊರೊನಾ ಕರ್ಫ್ಯೂ ಜಾರಿಗೊಳಿಸಿರುವ ಬೆನ್ನಲ್ಲೇ ಎರಡನೇ ದಿನದಂದು ಪಟ್ಟಣದಲ್ಲಿ ಗುರುವಾರ ಅನಗತ್ಯವಾಗಿ ಸಂಚರಿಸುವ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಕೊರೊನಾ ಕರ್ಫ್ಯೂ: ಅನಗತ್ಯ ಸಂಚರಿಸುವ ಸವಾರರಿಗೆ ಲಾಠಿ ರುಚಿ - ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು
ಪೊಲೀಸರು ಅನಗತ್ಯವಾಗಿ ಮನೆಯಿಂದ ಹೊರಗೆ ಸುತ್ತಾಡುವವರಿಗೆ ತಿಳಿ ಹೇಳಿದರಲ್ಲದೇ ಮನೆಯಲ್ಲಿ ಕೂರಲಾಗದೇ ಅಡ್ಡಾಡುವವರಿಗೆ ಲಾಠಿ ಏಟಿನ ರುಚಿ ತೋರಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದ ಪೊಲೀಸರು ಅನಗತ್ಯವಾಗಿ ಮನೆಯಿಂದ ಹೊರಗೆ ಸುತ್ತಾಡುವವರಿಗೆ ತಿಳಿ ಹೇಳಿದರಲ್ಲದೇ ಮನೆಯಲ್ಲಿ ಕೂರಲಾಗದೇ ಅಡ್ಡಾಡುವವರಿಗೆ ಲಾಠಿ ಏಟಿನ ರುಚಿ ತೋರಿಸಿದರು. ಮಾಸ್ಕ್ ಹಾಕಿಕೊಂಡೇ ಸಂಚರಿಸಿದ ಬೈಕ್ ಸವಾರರಿಗೂ ಪೊಲೀಸರು ಲಾಠಿ ಏಟು ಕೊಟ್ಟು ಅನಗತ್ಯವಾಗಿ ಹೊರಗಡೆ ಸುತ್ತಾಡದಂತೆ ತಾಕೀತು ಮಾಡಿದರು.
ಬಾಲಕನೊಬ್ಬ ಮಾಸ್ಕ್ ಹಾಕದೆ ಮೆಡಿಕಲ್ ಶಾಪ್‌ಗೆ ಬಂದಿದ್ದ. ಆತನನ್ನು ಹಿಡಿದ ಪೊಲೀಸರು, ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿ ಲಾಠಿ ಎತ್ತಿ ಬೆದರಿಸಿದರು. ಅಷ್ಟಕ್ಕೆ ‘ಸರ್ ಮಾಸ್ಕ್ ತಂದಿಲ್ರೀ, ಗುಳಿಗೆ ತರಕಾ ಬಂದಿದ್ದಿನ್ರೀ, ಬಿಟ್ಟಬಿಡ್ರಿ ಮನಿಗೆ ಹೊಕ್ಕಿನಿ’ ಎಂದು ಕಣ್ಣಲ್ಲಿ ನೀರು ತಂದುಕೊಂಡು ಮನವಿ ಮಾಡಿದಾಗ ಕರುಣೆ ತೋರಿದ ಪೊಲೀಸರು ಬಾಲಕನನ್ನು ಹಾಗೆ ಬಿಟ್ಟು ಕಳುಹಿಸಿ ಮತ್ತೊಮ್ಮೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬರುವಂತೆ ತಿಳಿಸಿದ ಘಟನೆ ನಡೆಯಿತು.