ವಿಜಯಪುರ :ಅಪರಾಧ ಲೋಕದಲ್ಲಿ ಕುಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಕ್ರಿಮಿನಲ್ ಚುಟುವಟಿಕೆಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಎಸ್ಪಿ ಹೆಚ್.ಡಿ ಆನಂದ ಕುಮಾರ್ ನೇತೃತ್ವದಲ್ಲಿ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಭೀಮಾತೀರದ ಚಡಚಣ, ಉಮರಾಣಿ, ಇಂಡಿ, ಸಿಂದಗಿ, ಆಲಮೇಲ ಭಾಗದಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ನಡೆಯದಂತೆ ಬ್ರೇಕ್ ಹಾಕೋದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲ, ನಟೋರಿಯಸ್ ಕ್ರಿಮಿನಲ್ ಶಶಿ ಮುಂಡೆವಾಡಿ ಕಳೆದ ಫೆಬ್ರವರಿ 22ರಂದು ಹಣಕ್ಕಾಗಿ ವ್ಯಾಪಾರಿಯೋರ್ವನನ್ನು ಅಪಹರಿಸಿ ಕೈಗೆ ಕೋಳ ಹಾಕಿಸಿಕೊಂಡ ಬಳಿಕ ಖಾಕಿ ಪಡೆ ಮತ್ತಷ್ಟು ಜಾಗೃತವಾಗಿದೆ. ಚಡಚಣ ಭಾಗದ ರೌಡಿಶೀಟರ್ಗಳ ಪರೇಡ್ ನಡೆಸಿ ಎಲ್ಲರಿಗೂ ಡಿವೈಎಸ್ಪಿ ದೊಡ್ಡಿ ಖಡಕ್ ವಾರ್ನ್ ಮಾಡಿದ್ದಾರೆ. ಬಾಲ ಬಿಚ್ಚಿದರೆ ಕಟ್ ಮಾಡೋದಾಗಿಯೂ ನೇರವಾಗಿ ಹೇಳಿದ್ದಾರೆ.
ಈ ಭಾಗದ ರೌಡಿಶೀಟರ್ಗಳಲ್ಲಿ ಕುಖ್ಯಾತಿ ಪಡೆದ ಮಹಾದೇವ ಭೈರಗೊಂಡ ಸೇರಿದಂತೆ ಇತರರ ಬೆವರು ಇಳಿಸಿದ್ದಾರೆ. 50ಕ್ಕೂ ಅಧಿಕ ರೌಡಿ ಶೀಟರ್ಗಳ ಪರೇಡ್ ನಡೆಸಿ ಪ್ರತಿ ತಿಂಗಳು ಎಲ್ಲರೂ ಚಡಚಣ ಪೊಲೀಸ್ ಠಾಣೆಗೆ ಆಗಮಿಸಿ ಹಾಜರಾತಿ ಹಾಕಿ ಹೋಗಬೇಕೆಂದು ಸೂಚನೆ ನೀಡಿದ್ದಾರೆ. ಚಡಚಣ ವ್ಯಾಪ್ತಿಯ ಯಾವುದೇ ರೌಡಿ ತಮ್ಮ ಪಾಡಿಗೆ ತಾವಿರಬೇಕೆಂದು ಎಚ್ಚರಿಕೆ ನೀಡಿದ್ದಾರೆ.