ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ ಮುಖ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಸಾರ್ಜನಿಕರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರನ್ನು ಕರೆದು, ನನಗೆ ನೆಪಗಳನ್ನು ಹೇಳಬೇಡಿ. ಇಷ್ಟು ದಿನವಾದರೂ ಇಲ್ಲಿ ಬೀದಿ ದೀಪದ ವ್ಯವಸ್ಥ ಕಲ್ಪಿಸಿಲ್ಲವೆಂದರೆ ಹೇಗೆ ? ನಿಮ್ಮದು ಯಾವ ಸೀಮೆ ಆಡಳಿತ ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕ ಎ.ಎಸ್.ಪಾಟೀಲ
ಶಾಸಕ ಎ.ಎಸ್.ಪಾಟೀಲ

By

Published : Nov 13, 2020, 7:46 PM IST

ಮುದ್ದೇಬಿಹಾಳ :ಇಷ್ಟು ವರ್ಷವಾದರೂ ನಿಮ್ಮಿಂದ ಲೈಟ್ ಹಾಕಿಸೋಕೆ ಆಗದಿರುವುದು ನಿಮ್ಮದೆಂತಹ ಆಡಳಿತ ರೀ. ನಿಮ್ಮಿಂದ ಆಗದಿದ್ದರೆ ಹೇಳಿ ನಾನು ಲೈಟ್ ತರಿಸಿಕೊಡುತ್ತೇನೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪುರಸಭೆ ಮುಖ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪಟ್ಟಣದ ಮಾರುತಿ ನಗರದಲ್ಲಿ ನಿವಾಸಿಗಳು ಸಿಸಿಟಿವಿ ಅಳವಡಿಸುವ ಕುರಿತು ಸಂಗ್ರಹಿಸಿದ ದೇಣಿಗೆಯ ಹಸ್ತಾಂತರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಸಾರ್ಜನಿಕರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರನ್ನು ಕರೆದು, ನನಗೆ ನೆಪಗಳನ್ನು ಹೇಳಬೇಡಿ. ಇಷ್ಟು ದಿನವಾದರೂ ಇಲ್ಲಿ ಬೀದಿ ದೀಪದ ವ್ಯವಸ್ಥ ಕಲ್ಪಿಸಿಲ್ಲವೆಂದರೆ ಹೇಗೆ ? ನಿಮ್ಮದು ಯಾವ ಸೀಮೆ ಆಡಳಿತ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಕಳೆದ 25 ವರ್ಷಗಳಿಂದ ಕೇಳದೇ ಇರುವ ಜನರು ನನ್ನನ್ನು ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಕೇವಲ ಒಂದೂವರೆ ವರ್ಷದಲ್ಲಿ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನತೆ ತಾಳ್ಮೆಯಿಂದ ಇದ್ದರೆ ಅಭಿವೃದ್ಧಿಗೆ ಹೆಚ್ಚಿನ ನೆರವು ತಂದು ಮಾದರಿ ಪಟ್ಟಣ, ಹಳ್ಳಿಗಳ ನಿರ್ಮಾಣ ಮಾಡುವುದಾಗಿ ಹೇಳಿದರು.

ABOUT THE AUTHOR

...view details