ಮುದ್ದೇಬಿಹಾಳ: ತಾಲೂಕಿನ ಯರಗಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ ಎಂಬ ಗ್ರಾಮಸ್ಥರ ಆರೋಪಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ಪ್ರತಿಕ್ರಿಯಿಸಿ, ಇಬ್ಬರ ಸಾವಿಗೆ ಕಲುಷಿತ ನೀರು ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನೀಲಮ್ಮ ನಾರಾಯಣಪ್ಪ ಬೆನಕಣ್ಣನವರ (70) ವಯೋಸಹಜ ಕಾಯಿಲೆ, ಹೃದಯ ಸಂಬಂಧಿತ ಕಾಯಿಲೆ ಹಾಗೂ ಹೈ-ಬಿಪಿಯಿಂದ ಬಳಲುತ್ತಿದ್ದರು. ಅವರು ಅ. 23 ರಂದು ಮೃತಪಟ್ಟಿದ್ದಾರೆ. ಅವರ ಕುಟುಂಬದಲ್ಲಿ ವಾಸಿಸುತ್ತಿದ್ದ ಇನ್ನುಳಿದ ಮೂವರು ಆರೋಗ್ಯದಿಂದಿದ್ದು ಪ್ರಸ್ತುತ ಯಾವುದೇ ತೊಂದರೆ ಇಲ್ಲ.
ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಸ್ಪಷ್ಟನೆ ಇನ್ನೊಬ್ಬ ವ್ಯಕ್ತಿ ಗುರುರಾಜ ಬಸವರಾಜ ಮಳಗಿ (21) ಪಿಟ್ಸ್ ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ವೈದ್ಯಾಧಿಕಾರಿಗಳ ಸಲಹೆಯನ್ನು ತಿರಸ್ಕರಿಸಿ ಆಸ್ಪತ್ರೆಯಿಂದ ವಾಪಸ್ಸಾಗಿದ್ದರು. ಅವರು ಅ.22 ರಂದು ಮೃತಪಟ್ಟಿದ್ದಾರೆ. ಅವರ ಮನೆಯಲ್ಲಿ ಇನ್ನುಳಿದ ಮೂವರು ಆರೋಗ್ಯದಿಂದ ಇದ್ದು ಪ್ರಸ್ತುತ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಆಸ್ತಿಗಾಗಿ ಪೀಡಿಸುತ್ತಿದ್ದ ಅಣ್ಣನನ್ನೇ ಕೊಲೆ ಮಾಡಿದ್ರಾ ದಾಯಾದಿಗಳು?
ಕುಡಿಯುವ ನೀರಿನ ಮಾದರಿಯನ್ನು ಈಗಾಗಲೇ ಗುಣಮಟ್ಟದ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪ್ರಯೋಗಾಲಯದ ವರದಿ ಬರಬೇಕಿದೆ ಎಂದು ಮಾಹಿತಿ ನೀಡಿದರು.