ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ : ಸಿಡಿಲು ಬಡಿದು ರೈತ ಸಾವು - Muddebihala thunderbolt news

ಸಿಡಿಲು ಬಡಿದು ಇಣಚಗಲ್ ಗ್ರಾಮದ ಹುಲಪ್ಪ ಯಲ್ಲಪ್ಪ ಮಾದರ ಎಂಬ ರೈತ ಸಾವನ್ನಪ್ಪಿದ್ದಾನೆ. ಹೊಲದಲ್ಲಿದ್ದಾಗ ಮಧ್ಯಾಹ್ನ ಭಾರೀ ಮಳೆಯ ಜೊತೆಗೆ ಜೋರಾಗಿ ಗುಡುಗು, ಸಿಡಿಲಿನ ಆರ್ಭಟ ಶುರುವಾಗಿದೆ. ರೈತ ಹುಲಗಪ್ಪ ರಕ್ಷಣೆಗೆ ಹೊಲದಲ್ಲಿರುವ ಮರದ ಕೆಳಗೆ ಆಶ್ರಯ ಪಡೆದುಕೊಂಡಿದ್ದಾನೆ. ಈ ವೇಳೆ ಸಿಡಿಲು ಮರಕ್ಕೆ ಬಡಿದು ಕೆಳಗೆ ನಿಂತಿದ್ದ ರೈತನಿಗೂ ಬಡಿದಿದೆ.

ಸಿಡಿಲು ಬಡಿದು ರೈತ ಸಾವು
ಸಿಡಿಲು ಬಡಿದು ರೈತ ಸಾವು

By

Published : Oct 4, 2020, 10:11 PM IST

ಮುದ್ದೇಬಿಹಾಳ: ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಇಣಚಗಲ್ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಸಾವಿನ ಸುದ್ದಿ ತಿಳಿಸಿದ ಎತ್ತುಗಳು: ಭಾರೀ ಮಳೆಯಿಂದ ಸಿಡಿಲಿನ ಹೊಡೆತಕ್ಕೆ ಭಯ ಬಿದ್ದು ಎತ್ತುಗಳು ಮನೆಗೆ ವಾಪಸ್ಸಾಗಿವೆ. ಎತ್ತುಗಳ ಜೊತೆಗೆ ರೈತ ಹುಲಗಪ್ಪ ಬಾರದೇ ಇರುವುದರಿಂದ ಸಂಶಯಗೊಂಡ ರೈತನ ಪತ್ನಿ ದೇವಮ್ಮ ಅಕ್ಕಪಕ್ಕದ ಹೊಲದವರ ಬಳಿ ವಿಚಾರಿಸಿದ್ದಾರೆ. ಯಾರಿಂದಲೂ ಸಮರ್ಪಕ ಉತ್ತರ ಬಾರದಿದ್ದರಿಂದ ಹೊಲಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇಣಚಗಲ್ ಗ್ರಾಮದ ಹುಲಪ್ಪ ಯಲ್ಲಪ್ಪ ಮಾದರ (38) ಸಿಡಿಲಿಗೆ ಬಲಿಯಾದ ರೈತ. ಹೊಲದಲ್ಲಿದ್ದಾಗ ಮಧ್ಯಾಹ್ನ ಭಾರೀ ಮಳೆಯ ಜೊತೆಗೆ ಜೋರಾಗಿ ಗುಡುಗು, ಸಿಡಿಲಿನ ಆರ್ಭಟ ಶುರುವಾಗಿದೆ. ರೈತ ಹುಲಗಪ್ಪ ರಕ್ಷಣೆಗೆ ಹೊಲದಲ್ಲಿರುವ ಮರದ ಕೆಳಗೆ ಆಶ್ರಯ ಪಡೆದುಕೊಂಡಿದ್ದಾನೆ.

ಈ ವೇಳೆ ಸಿಡಿಲು ಮರಕ್ಕೆ ಬಡಿದು ಕೆಳಗೆ ನಿಂತಿದ್ದ ರೈತನಿಗೂ ಬಡಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ತಾಳಿಕೋಟಿ ಎ ಎಸೈ ಜಿ.ಜಿ.ಬಿರಾದಾರ, ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details