ಕರ್ನಾಟಕ

karnataka

ಕೃಷಿ ಹೊಂಡದ NMR ಕೊಡಲು ಪಂಚಾಯತ್ ಅಧಿಕಾರಿಗಳು ಲಂಚ ಕೇಳಿದ ಆರೋಪ

By

Published : Jun 24, 2020, 4:50 PM IST

ದಾಖಲೆ ಬೇಕಾದ್ರೆ ಹಣ ಕೊಡಬೇಕು. ಇಲ್ಲದಿದ್ರೆ ದಾಖಲೆ ಸಿಗಲ್ಲ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಲಂಚ ಕೇಳುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಪಂ ಇಒ ಶಶಿಕಾಂತ ಶಿವಪೂರೆಗೆ ಮನವಿ ಸಲ್ಲಿಸಿದ್ದಾರೆ..

dsd
ಕೃಷಿ ಹೊಂಡದ NMR ಕೊಡಲು ಪಂಚಾಯಿತಿ ಅಧಿಕಾರಿಗಳಿಂದ ಲಂಚದ ಆರೋಪ

ಮುದ್ದೇಬಿಹಾಳ : ಕೃಷಿ ಹೊಂಡದ ಎನ್‌ಎಂಆರ್ ತೆಗೆದುಕೊಡಲು ಪಂಚಾಯತ್‌ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ನೇಬಗೇರಿ ಗ್ರಾಮದ ಯುವಕರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕೃಷಿ ಹೊಂಡದ NMR ಕೊಡಲು ಪಂಚಾಯತ್‌ ಅಧಿಕಾರಿಗಳು ಲಂಚ ಕೇಳಿದ ಆರೋಪ

ಪಟ್ಟಣದ ತಾಪಂ ಕಚೇರಿಗೆ ಆಗಮಿಸಿದ ಗ್ರಾಮದ ಯುವಕರು, ಸರ್ಕಾರದ ಯೋಜನೆಗೆ ಹಣ ಏಕೆ ಕೊಡಬೇಕು ಎಂದು ಕೇಳಿದ್ರೆ ನಿಮಗೆ ಪ್ರಿಂಟ್ ಕೊಡಲು ಮಸಿ ಖರ್ಚಾಗುತ್ತದೆ.

ಅದನ್ನು ಯಾರು ಕೊಡಬೇಕು?. ನಿಮಗೆ ದಾಖಲೆ ಬೇಕೆಂದ್ರೆ ಹಣ ಕೊಡಬೇಕು. ಇಲ್ಲಾಂದ್ರೆ ದಾಖಲೆ ಸಿಗುವುದಿಲ್ಲ ಎಂದು ಹೇಳುತ್ತಿರುವುದಾಗಿ ಆರೋಪಿಸಿದ್ದಾರೆ. ಲಂಚ ಕೇಳುವವರ ವಿರುದ್ಧ ಕ್ರಮಕೈಗೊಳ್ಳುವಂತೆ ತಾಪಂ ಇಒ ಶಶಿಕಾಂತ ಶಿವಪೂರೆಗೆ ಮನವಿ ಸಲ್ಲಿಸಿದ್ದಾರೆ.

ABOUT THE AUTHOR

...view details