ವಿಜಯಪುರ:ಸಂತ್ರಸ್ತರು ಸಹಜ ಜೀವನಕ್ಕೆ ಮರಳುವವರೆಗೂ ನಾನು ಅವರೊಂದಿಗೆ ಇರುತ್ತೇನೆ. ರಾಜ್ಯ, ಕೇಂದ್ರ ಸರ್ಕಾರದ ಅನುದಾನವನ್ನೂ ಸಂತ್ರಸ್ತರಿಗೆ ಮುಟ್ಟಿಸುವ ಕೆಲಸವನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಹೇಳಿದರು.
ಸಂತ್ರಸ್ತರ ಜತೆ ವಾಸ್ತವ್ಯ ಹೂಡಿದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ..
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನೆರೆ ಸಂತ್ರಸ್ತರ ಜತೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ವಾಸ್ತವ್ಯ ಹೂಡಿದ್ದಾರೆ. ನೆರೆ ಪೀಡಿತ ಪ್ರದೇಶ ಸಹಜ ಸ್ಥಿತಿಗೆ ಮರಳುವವರೆಗೂ ಸಂತ್ರಸ್ತರೊಂದಿಗೆ ಇರೋದಾಗಿ ಶಾಸಕ ನಡಹಳ್ಳಿ ಭರವಸೆ ನೀಡಿದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ
ಇಲ್ಲಿನ ಮುದ್ದೇಬಿಹಾಳದ ತಂಗಡಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಸಂತ್ರಸ್ತರ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು,ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಅವರಿಗೆ ಅಗತ್ಯ ನೆರವಿನ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಅವುಗಳನ್ನು ಪೂರೈಸಿ, ಅವರೊಂದಿಗೆ ಗಂಜಿ ಕೇಂದ್ರದಲ್ಲಿಯೇ ವಾಸಿಸುತ್ತೇನೆ ಎಂದು ಹೇಳಿದರು.
ಸಂತ್ರಸ್ತರ ಜತೆಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಅವರಿಗೆ ಭರವಸೆ ನೀಡಿದರು. ಮೊದಲ ಬಾರಿಗೆ ಶಾಸಕರೊಬ್ಬರು ಸಂತ್ರಸ್ತರ ಜತೆ ವಾಸ್ತವ್ಯ ಹೂಡಿರೋದು ಮೆಚ್ಚುಗೆಗೆ ಕಾರಣವಾಗಿದೆ.