ಕರ್ನಾಟಕ

karnataka

ETV Bharat / state

'ಕೊರೊನಾಗೂ ಮನುಷ್ಯರಿಗೂ ​ಗಂಡ-ಹೆಂಡತಿ ಸಂಬಂಧ ಇದ್ದಂತೆ, ಹೊಂದಿಕೊಂಡು ಜೀವಿಸಬೇಕು' - corona latest news

ಮುದ್ದೇಬಿಹಾಳದ ಪಟ್ಟಣದ ಕರ್ನಾಟಕ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ಗೌರಿಶಂಕರ ಪುರಾಣಿಕಮಠ ಕುಟುಂಬದವರು ಕೊರೊನಾ ವಾರಿಯರ್ಸ್​ಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ಗರು. ಈ ವೇಳೆ ಶಾಸಕ ನಡಹಳ್ಳಿ ಮಾತನಾಡಿ, ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುತ್ತಿದ್ದ ಜನ ಈಗ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ ಎಂದು ತಿಳಿಸಿದರು.

mla-nadahalli
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ

By

Published : Jun 28, 2020, 3:29 PM IST

ಮುದ್ದೇಬಿಹಾಳ: ಕೊರೊನಾ ವೈರಸ್​ಗೂ ಮನುಷ್ಯರಿಗೂ ಈಗ ಗಂಡ-ಹೆಂಡತಿ ಸಂಬಂಧಂತಿದೆ. ಈ ವೈರಸ್‌ನೊಂದಿಗೆ ನಾವೆಲ್ಲ ಬದುಕು ಸಾಗಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಕರ್ನಾಟಕ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ಗೌರಿಶಂಕರ ಪುರಾಣಿಕಮಠ ಕುಟುಂಬದವರು ಆಯೋಜಿಸಿದ್ದ, ಕೊರೊನಾ ವಾರಿಯರ್ಸ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುತ್ತಿದ್ದವರು ಈಗ ಜೀವ ಉಳಿಸಿಕೊಳ್ಳಲು ಅದೇ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿಕೊಂಡಿವೆ ಎಂದರು.

ಜನರು ಈಗ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ ಎಂದ ನಡಹಳ್ಳಿ

ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಮಾತನಾಡಿ, ಕೊರೊನಾ ಹೋಗಲಾಡಿಸಲು ಅಗತ್ಯವಾಗಿರುವ ಸ್ಯಾನಿಟೈಸರ್, ಸಾಬೂನು ಸಾಮಗ್ರಿಯ ಮೇಲೆ ಸರ್ಕಾರ ಸಬ್ಸಿಡಿ ನೀಡಬೇಕು ಎಂದರು.

ಬಸವನ ಬಾಗೇವಾಡಿ ಶಿವಪ್ರಕಾಶ್ ಶಿವಾಚಾರ್ಯರು, ತಹಶೀಲ್ದಾರ್ ಜಿ.ಎಸ್. ಮಳಗಿ, ಜಂಗಮ ಸಮಾಜದ ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details