ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರ ಆಗಮನ: ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದ ಶಾಸಕ ನಡಹಳ್ಳಿ

ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಆಗಮಿಸುತ್ತಿರುವ ಹಿನ್ನೆಲೆ ಮುದ್ದೇಬಿಹಾಳ ತಾಲೂಕಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

MlA A.S. patila Nadahalli discussing preemptive measures with offials in muddebihal
ವಲಸೆ ಕಾರ್ಮಿಕರು ಆಗಮನ..ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದ ಶಾಸಕ ನಡಹಳ್ಳಿ

By

Published : May 16, 2020, 12:27 PM IST

ಮುದ್ದೇಬಿಹಾಳ(ವಿಜಯಪುರ):ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಆಗಮಿಸುತ್ತಿರುವ ಹಿನ್ನೆಲೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮುದ್ದೇಬಿಹಾಳ ತಾಲೂಕಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ವಲಸೆ ಕಾರ್ಮಿಕರ ಆಗಮನ: ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದ ಶಾಸಕ ನಡಹಳ್ಳಿ

ಮಹಾರಾಷ್ಟ್ರದಿಂದ ಆಗಮಿಸುವ ವಲಸೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿ, ಕ್ವಾರಂಟೈನ್‌ನಲ್ಲಿ ಇಡಬೇಕು. ಗ್ರಾಮೀಣ ಭಾಗದಲ್ಲಿ ಕ್ವಾರಂಟೈನ್​ ಮಾಡುವುದರಿಂದ ಸಾಕಷ್ಟು ವಿರೋಧಗಳು ಹುಟ್ಟಿಕೊಳ್ಳಬಹುದು. ಆದ್ದರಿಂದ ಜನರಿಗೆ ಸೂಕ್ತ ತಿಳುವಳಿಗೆ ನೀಡಿ, ಹದಿನಾಲ್ಕು ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಲು ಶ್ರಮಿಸಬೇಕು ಎಂದು ಡಿವೈಎಸ್ಪಿ ಈ.ಶಾಂತವೀರ, ಸಿಪಿಐ ಆನಂದ ವಾಘಮೋಡೆ, ಪಿಎಸ್​​ಐ ಮಲ್ಲಪ್ಪ ಮಡ್ಡಿ ಅವರಿಗೆ ಸೂಚಿಸಿದ್ರು.

ವಲಸೆ ಕಾರ್ಮಿಕರ ಆಗಮನ: ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದ ಶಾಸಕ ನಡಹಳ್ಳಿ
ವಲಸೆ ಕಾರ್ಮಿಕರ ಆಗಮನ: ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದ ಶಾಸಕ ನಡಹಳ್ಳಿ

ಬಡ ಜನರು ಮತ್ತು ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿರುವ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ತಾಳಿಕೋಟಿಯ ಸಿದ್ಧಲಿಂಗ ಸ್ವಾಮೀಜಿ, ಕೊಡೇಕಲ್‌ನ ಶಿವಕುಮಾರ ಸ್ವಾಮೀಜಿಗಳು ತಾಳಿಕೋಟಿ ಪಟ್ಟಣದ ಶ್ರೀ ಘನಮಠೇಶ್ವರ ಸಂಸ್ಥೆಯ ಕಾಲೇಜಿನಲ್ಲಿ ಸನ್ಮಾನಿಸಿದ್ದಾರೆ.

ABOUT THE AUTHOR

...view details