ಕರ್ನಾಟಕ

karnataka

By

Published : Jul 8, 2021, 3:48 PM IST

ETV Bharat / state

ಕೆಆರ್​ಎಸ್​ನಲ್ಲಿ ಯಾವುದೇ ಬಿರುಕಿಲ್ಲ, ರೈತರು ವದಂತಿಗೆ ಕಿವಿಗೊಡಬೇಡಿ: ಮುರುಗೇಶ್​​ ನಿರಾಣಿ

ಕೆಆರ್​ಎಸ್​ ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮುರುಗೇಶ್ ನಿರಾಣಿ, ಇದೆಲ್ಲಾ ಕೇವಲ ಊಹಪೋಹವಷ್ಟೇ, ಯಾರೂ ಕಿಡಿಗೊಡಬೇಡಿ ಎಂದರು.

Minister Murugesh nirani Reacted on KRS Dam issue
ಮುರುಗೇಶ್​​ ನಿರಾಣಿ

ವಿಜಯಪುರ: ಕೆಆರ್​​ಎಸ್​​ ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.

ಜಿಲ್ಲೆಯ ಕೊಲ್ಹಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಬೇಬಿ ಬೆಟ್ಟಕ್ಕೆ ನಾನು ಭೇಟಿ ನೀಡಿದ್ದೇನೆ. ವೈಜ್ಞಾನಿಕವಾಗಿ ಪರೀಕ್ಷೆ ಆಗುವವರೆಗೂ ಯಾವುದೇ ಗಣಿಗಾರಿಕೆ ನಡೆಸಬಾರದು ಎಂದು ಸೂಚಿಸಲಾಗಿದೆ ಎಂದರು.

ಕೆಆರ್​ಎಸ್​ನಲ್ಲಿ ಯಾವುದೇ ಬಿರುಕಿಲ್ಲ ಮುರುಗೇಶ್​​ ನಿರಾಣಿ ಸ್ಪಷ್ಟನೆ

ಕಳೆದ 4 ತಿಂಗಳಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ಈ ಸಂಬಂಧ ಕೆಆರ್​​​ಎಸ್ ಮುಖ್ಯ ಇಂಜಿನಿಯರ್ ಜೊತೆ ಸಹ ಮಾತನಾಡಿದ್ದೇನೆ. ಕೆಆರ್​​ಎಸ್ ಸುತ್ತಮುತ್ತ 10 ಕಿಮೀ ಗಣಿಗಾರಿಕೆ ಬಂದ್ ಮಾಡಲಾಗಿದೆ. ಬಿರುಕು ಬಿಟ್ಟಿರುವುದು ಕೇವಲ ಊಹಾಪೋಹಗಳಷ್ಟೇ. ರೈತರು ಇದಕ್ಕೆಲ್ಲ ಕಿವಿಕೊಡಬೇಡಿ ಎಂದು ಮನವಿ‌ ಮಾಡಿದರು.

ಇದನ್ನೂ ಓದಿ:ನಾಯಕತ್ವದ ವಿರುದ್ಧ ಕೆಲವರ ಅಪಸ್ವರ: ದಿಲ್ಲಿಗೆ ಶಾಸಕರ ನಿಯೋಗ ಕೊಂಡೊಯ್ಯುವ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು?

ABOUT THE AUTHOR

...view details