ವಿಜಯಪುರ:ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಯನ್ನು ಎಸ್ಡಿಪಿಐ ಸಮರ್ಥಿಸಿಕೊಂಡಿದ್ದು, ಕೂಡಲೇ ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಒತ್ತಾಯಿಸಿದರು.
ಬೆಂಗಳೂರು ಗಲಭೆ ಸಮರ್ಥಿಸಿಕೊಳ್ಳುವವರ ವಿರುದ್ಧ ಕ್ರಮಕ್ಕೆ ಸಚಿವೆ ಜೊಲ್ಲೆ ಆಗ್ರಹ - bangalore violence
ಬೆಂಗಳೂರಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಇಂತಹ ಘಟನೆಗಳನ್ನು ಸಮರ್ಥಿಸಿಕೊಳ್ಳುವ ಸಂಘಟನೆ, ಪಕ್ಷಗಳನ್ನು ನಿಷೇಧಿಸಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಆಗ್ರಹಿಸಿದರು.
ಸಚಿವೆ ಶಶಿಕಲಾ ಜೊಲ್ಲೆ
ಸರ್ಕಾರ ಈ ಗಲಭೆ ಸಂಬಂಧಿಸಿದಂತೆ ಸೂಕ್ತ ತನಿಖೆ ಕೈಗೊಂಡಿದೆ. ಇಂತಹ ಘಟನೆಯಲ್ಲಿ ಪೊಲೀಸ್ ಗುಂಡೇಟಿಗೆ ಮೃತಪಟ್ಟವರು ಅಮಾಯಕರು ಹೌದೋ, ಅಲ್ಲವೋ ಎಂಬುದನ್ನು ತಿಳಿದ ನಂತರ ಪರಿಹಾರ ನೀಡಬೇಕು ಎಂದು ಪರೋಕ್ಷವಾಗಿ ಶಾಸಕ ಜಮೀರ್ ಅಹ್ಮದ್ಗೆ ತಿರುಗೇಟು ನೀಡಿದರು.
ಗಲಭೆಯಂತಹ ಕೃತ್ಯವನನ್ನು ಸಮರ್ಥಿಸಿಕೊಳ್ಳುವವರಿಗೆ ಏನು ಹೇಳುವುದಕ್ಕೂ ಆಗುವುದಿಲ್ಲ. ಗಲಭೆಯಲ್ಲಿ ಸಾವನ್ನಪ್ಪಿದ ಯುವಕರಿಗೆ ಪರಿಹಾರ ನೀಡುವುದನ್ನು ಖಂಡಿಸುತ್ತೇನೆ. ಇದರಿ ಹಿಂದೆ ರಾಜಕೀಯ ಅಡಗಿದೆ ಎಂದು ದೂರಿದರು.