ಕರ್ನಾಟಕ

karnataka

ETV Bharat / state

ವಿಜಯಪುರ: ಗಂಡ ಹೆಂಡತಿ ಜಗಳ ಬಿಡಿಸಲು ಹೋದ ವ್ಯಕ್ತಿ ಕೊಲೆ

ಗಂಡ ಹೆಂಡತಿ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಗುರುಪಾದೇಶ್ವರ ನಗರದಲ್ಲಿ ನಡೆದಿದೆ.

Man murdered in vijayapur
ಪರುಶರಾಮ ಅಬಟೇರಿ

By

Published : Aug 12, 2022, 9:57 AM IST

ವಿಜಯಪುರ:ಗಂಡ ಹೆಂಡತಿಯ ಜಗಳ ಬಿಡಿಸಲು ಮಧ್ಯ ಬಂಧವನೇ ಭೀಕರವಾಗಿ ಕೊಲೆಯಾಗಿರುವ ಘಟನೆ ಜಿಲ್ಲೆಯ ಗುರುಪಾದೇಶ್ವರ ನಗರದಲ್ಲಿ ನಡೆದಿದೆ. ಪರುಶರಾಮ ಅಬಟೇರಿ (30) ಮೃತಪಟ್ಟ ದುರ್ದೈವಿ.

ಮೂಲತಃ ಬಾಗಲಕೋಟೆ ಜಿಲ್ಲೆಯ ಅಚನೂರು ಗ್ರಾಮದ ನಿವಾಸಿಯಾಗಿದ್ದ ಪರಶುರಾಮ ವಿಜಯಪುರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಮಾಡುತ್ತಿದ್ದ. ಕಳೆದ 15 ದಿನಗಳ ಹಿಂದೆಯಷ್ಟೇ ಗುರುಪಾದೇಶ್ವರ ನಗರದ ಕೆಇಬಿ ನಿವೃತ್ತ ನೌಕರ ಈಜೇರಿ ಎಂಬುವರ ಮನೆಯಲ್ಲಿ ಪತ್ನಿಯೊಂದಿಗೆ ಬಾಡಿಗೆಗೆ ವಾಸವಾಗಿದ್ದ. ಹಬ್ಬಕ್ಕಾಗಿ ಪತ್ನಿ ತವರಿಗೆ ಹೋಗಿದ್ದರು.

ನಿನ್ನೆ ಸಂಜೆ 4:30ರ ವೇಳೆಗೆ ಮನೆಯ ಮಾಲೀಕನ ಮಗ ಮತ್ತು ಆತನ ಹೆಂಡತಿ ಜಗವಾಡುತ್ತಿದ್ದರು. ಜಗಳ ಬಿಡಿಸಲು ಪರುಶರಾಮ ಹೋಗಿದ್ದಾನೆ. ಈ ಸಂದರ್ಭದಲ್ಲಿ ಜಗಳ ವಿಕೋಪ ಹೋಗಿ ಹೆಂಡತಿಯ ಸಂಬಂಧಿಕರು ಪರಶುರಾಮನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪರಶುರಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೈಕ್ ಸ್ಕಿಡ್ ಆಗಿ ಬಿದ್ದ ಬಾಲಕನ ಮೇಲೆ ಹರಿದ‌ ಟ್ರಕ್.. ಸ್ಥಳದಲ್ಲೇ ಸಾವು!

ABOUT THE AUTHOR

...view details