ವಿಜಯಪುರ :ಭೀಮಾತೀರದ ಸಾಹುಕಾರ ಮಹಾದೇವ ಭೈರಗೊಂಡ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಸಾರವಾಡದ ಕಾಶಿನಾಥ ತಾಳಿಕೋಟೆ, ಯುನಿಷ್ ಅಲಿ ಮುಜಾವರ, ರಾಜು ಗುನ್ನಾಪುರ ಹಾಗೂ ಸಿದ್ದು ಮೂಡಂಗಿ ಎಂದು ಗುರುತಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ್ದ ಒಂದು ಮಚ್ಚು, ಎರಡು ಮೊಬೈಲ್ ಹಾಗೂ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.