ಕರ್ನಾಟಕ

karnataka

ETV Bharat / state

15 ಲಕ್ಷ ಎಲ್ಲಿ? ಬಡವರ ಜೀವನವೂ ಬರ್ಬಾದ್​..  ಮೋದಿ ವಿರುದ್ಧ ಹೋಮ್​​ ಮಿನಿಸ್ಟರ್​ ಗರಂ​

ಪ್ರಧಾನಿ ಮೋದಿ ನೋಟ್ ಬ್ಯಾನ್, ಜಿಎಸ್​ಟಿ ತಂದು ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಪ್ರತಿಯೊಬ್ಬರ ಅಕೌಂಟ್​ಗೆ 15 ಲಕ್ಷ ರೂ. ಹಾಕುತ್ತೇನೆ ಎಂದು, 5 ವರ್ಷವಾದರೂ 15 ಪೈಸಾ ಸಹ ಹಾಕಲಿಲ್ಲ. ಗೃಹ ಸಚಿವ ಎಂ.ಬಿ.ಪಾಟೀಲ್​ ವಾಗ್ದಾಳಿ

By

Published : Apr 4, 2019, 6:55 PM IST

ಎಂ.ಬಿ.ಪಾಟೀಲ

ವಿಜಯಪುರ:ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಅವರನ್ನು ಗೆಲ್ಲಿಸಲು ಕಾಂಗ್ರೆಸ್-ಜೆಡಿಎಸ್ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಪ್ರಚಾರ ನಡೆಸಲಿದ್ದೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ

ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಹೋಮ್ ಮಿನಿಸ್ಟರ್​ ಎಂ.ಬಿ.ಪಾಟೀಲ್​, ಪ್ರತಿ ಕ್ಷೇತ್ರದಲ್ಲಿ ಉಭಯ ನಾಯಕರು ಪ್ರಚಾರ ನಡೆಸಲಿದ್ದೇವೆ. 10 ವರ್ಷದಿಂದ ಸಂಸದರಾಗಿರುವ ಬಿಜೆಪಿ ಅಭ್ಯರ್ಥಿ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ನೋಟ್ ಬ್ಯಾನ್, ಜಿಎಸ್​ಟಿ ತಂದು ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಪ್ರತಿಯೊಬ್ಬರ ಅಕೌಂಟ್​ಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದ್ದವರು, ಐದು ವರ್ಷವಾದರೂ 15 ಪೈಸೆ ಸಹ ಹಾಕಲಿಲ್ಲ. ಕೇವಲ ಸುಳ್ಳು ಹೇಳುವುದರಲ್ಲಿ ಕಾಲ ಕಳೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗೃಹ ಸಚಿವ ಎಂ.ಬಿ.ಪಾಟೀಲ

ಭಿನ್ನಾಭಿಪ್ರಾಯವಿಲ್ಲ :
ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ - ಜೆಡಿಎಸ್ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿ ಡಾ. ಸುನಿತಾ ಚವ್ಹಾಣ ಅವರನ್ನು ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದರು.

ABOUT THE AUTHOR

...view details