ವಿಜಯಪುರ:ನನಗೆ ಜೀವ ಬೆದರಿಕೆ ಹಾಕಲಾಗಿದೆ. ತನ್ನ ಹಾಗೂ ಕುಟುಂಬಸ್ಥರ ಜೀವಕ್ಕೇನಾದರೂ ಹಾನಿಯಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಶಾಸಕ ದೇವಾನಂದ ಚೌಹಾಣ್ ಹೇಳಿದ್ದಾರೆ.
ಜೆಡಿಎಸ್ ಶಾಸಕ ದೇವಾನಂದ ಚೌಹಾಣ್‌ರಿಗೆ ಜೀವ ಬೆದರಿಕೆ - Life threaten for MLA Devanand chavan
ನಿನ್ನದು ಬಾಳ ಆಗೈತಿ, ನಿನ್ನ ಬಿಡೋದಿಲ್ಲ ಎಂದು ಕೆಲ ದುಷ್ಕರ್ಮಿಗಳು ಶಾಸಕ ದೇವಾನಂದ ಚೌಹಾಣ್ ಅವರಿಗೆ ಧಮ್ಕಿ ಹಾಕಿದ್ದಾರೆ. ನಮ್ಮ ಮನೆ ಆವರಣದಲ್ಲಿರುವ ಶ್ರೀಗಂಧ ಮರ ಕಳ್ಳತನದ ನೆಪದಲ್ಲಿ ಬಂದಿದ್ದ ಕೆಲವರು, ನನಗೆ ಜೀವ ಬೆದರಿಕೆ ಹಾಕಿದ್ದಾರೆ..
ಶಾಸಕ ದೇವಾನಂದ ಚವ್ಹಾಣ
ನ.16ರಂದು ಶ್ರೀಗಂಧ ಮರ ಕಳ್ಳತನದ ನೆಪದಲ್ಲಿ ದುರ್ಷ್ಕಮಿಗಳು ಮನೆಯ ಆವರಣಕ್ಕೆ ಬಂದಿದ್ದರು. ಭಾರೀ ಶಬ್ದ ಕೇಳಿ ಬಂದ ಕಾರಣ ತಮ್ಮ ಮನೆಯ ಹಿಂದಿನ ಬಾಲ್ಕನಿ ಮೇಲೆ ನಿಂತು ಗಮನಿಸಿದೆ. ನನ್ನನ್ನು ಕಾಣುತ್ತಿದ್ದಂತೆ ನನಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದರು.
ಅಲ್ಲದೇ ನಿನ್ನದು ಬಾಳ ಆಗೈತಿ, ನಿನ್ನ ಬಿಡೋದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಅವತ್ತು ಬಾಲ್ಕನಿಗೆ ಗ್ರಿಲ್ ಇರದೇ ಹೋಗಿದ್ದರೆ ಅವರೆಲ್ಲ ನನ್ನ ಕೊಂದೇ ಬಿಡುತ್ತಿದ್ದರು ಎಂದರು.