ಕರ್ನಾಟಕ

karnataka

ETV Bharat / state

ಅತಿಕ್ರಮಣ ತೆರವುಗೊಳಿಸಿ ರಸ್ತೆ ನಿರ್ಮಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ - dc p sunil kumar

ಕಾಳಗಿ ಗ್ರಾಮದ ಸರಕಾರಿ ಆಸ್ಪತ್ರೆಯಿಂದ ಸರಕಾರಿ ಪ್ರೌಢಶಾಲೆಯವರೆಗೆ ಈ ಮೊದಲು ರಸ್ತೆ ಇತ್ತು. ಒಂದು ಕಿ.ಮೀ ಹಳೆಯ ರಸ್ತೆ ಇದ್ದು ಈಗ ಆ ರಸ್ತೆ ಅತಿಕ್ರಮಣಗೊಂಡಿದೆ. ಅದನ್ನು ತೆರವುಗೊಳಿಸಿ ಸರಕಾರಿ ಪ್ರೌಢಶಾಲೆಗೆ ಮಕ್ಕಳು ಹೋಗಲು ಹಾಗೂ ಹೊಲಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಗಿದೆ.

letter
letter

By

Published : Sep 9, 2020, 5:45 PM IST

Updated : Sep 9, 2020, 6:49 PM IST

ಮುದ್ದೇಬಿಹಾಳ (ವಿಜಯಪುರ):ತಾಲೂಕಿನ ಕಾಳಗಿ ಗ್ರಾಮದಲ್ಲಿ ರಸ್ತೆ ಅತಿಕ್ರಮಣವಾಗಿದ್ದು ಅದನ್ನು ತೆರವುಗೊಳಿಸಿ, ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಅವರಿಗೆ ಕಾಳಗಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಕಾರ್ಯನಿಮಿತ್ತ ಆಗಮಿಸಿದ್ದ ಡಿಸಿ ಪಿ.ಸುನೀಲ ಕುಮಾರ್ ಅವರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಕಾಳಗಿ ಗ್ರಾಮದ ಸರಕಾರಿ ಆಸ್ಪತ್ರೆಯಿಂದ ಸರಕಾರಿ ಪ್ರೌಢಶಾಲೆಯವರೆಗೆ ಈ ಮೊದಲು ರಸ್ತೆ ಇತ್ತು. ಒಂದು ಕಿ.ಮೀ ಹಳೆಯ ರಸ್ತೆ ಇದ್ದು ಈಗ ಆ ರಸ್ತೆ ಅತಿಕ್ರಮಣಗೊಂಡಿದೆ. ಅದನ್ನು ತೆರವುಗೊಳಿಸಿ ಸರಕಾರಿ ಪ್ರೌಢಶಾಲೆಗೆ ಮಕ್ಕಳು ಹೋಗಲು ಹಾಗೂ ಹೊಲಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕು.

ಸರ್ವೆ ನಂ 171ರಲ್ಲಿ ಬರುವ ರಸ್ತೆಯ ಜಾಗದಲ್ಲಿ ಖಾಸಗಿ ಕಟ್ಟಡಗಳು, ಕಂಪೌಂಡಗಳನ್ನು ಕಟ್ಟಿ ಅತಿಕ್ರಮಣ ಮಾಡಿಕೊಂಡಿದ್ದು ಕೂಡಲೇ ಪ್ರೌಢಶಾಲೆಗೆ ಹೋಗುವ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವೇಳೆ ತಾಳಿಕೋಟಿ ತಹಶೀಲ್ದಾರ್ ಅನಿಲ ಕುಮಾರ ಢವಳಗಿ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಬಸಪ್ಪ ಗೊಳಸಂಗಿ, ಪರಸಪ್ಪ ಅಂಬಿಗೇರ, ಬಸಪ್ಪ ಕುಂಬಾರ, ಮಾರುತಿ ಭಜಂತ್ರಿ, ರಾವುತಪ್ಪ ಮಾದರ, ಪ್ರಕಾಶ ಮಾದರ, ಚಂದ್ರಾಮಪ್ಪ ಬಳೂತಿ, ಶೇಖಪ್ಪ ಕುಂಬಾರ, ವಿಠ್ಠಪ ನಾಶಿ, ಮುತ್ತಣ್ಣ ಸಿಂಹಾಸನ, ಮಹಾಂತೇಶ ಸಜ್ಜನ, ಲಕ್ಷ್ಮೀ ಬಾಯಿ ಹಿರೇಮಠ, ಮಹಾದೇವಿ ಕಲ್ಮಠ ಎಚ್.ಎಸ್.ಒಡೆಯರ್ ಮತ್ತಿತರರು ಇದ್ದರು.

Last Updated : Sep 9, 2020, 6:49 PM IST

ABOUT THE AUTHOR

...view details