ಕರ್ನಾಟಕ

karnataka

ETV Bharat / state

ಬಾಣಂತಿ ಸಾವು...ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ - ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ

ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವನ್ನಪ್ಪಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ನಿರ್ಲಕ್ಷ ಆರೋಪ ಕೇಳಿಬಂದಿದೆ

lactating women died in vijaypur
ಬಾಣಂತಿ ಸಾವು

By

Published : Apr 11, 2020, 5:28 PM IST

ವಿಜಯಪುರ:ವೈದ್ಯರ ನಿರ್ಲಕ್ಷ್ಯದಿಂದ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಬಾಣಂತಿ ಸಾವು
ಸುಷ್ಮಾ ಭಂಡಾರಿ ( 33) ಎಂಬ ಮಹಿಳೆ ಹೆರಿಗೆಗಾಗಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದರು‌. ಸುಷ್ಮಾ ಗಂಡು ಮಗುವಿಗೆ ಜನ್ಮ ನೀಡಿದರು. ಆದ್ರೆ ಬಾಣಂತಿ ಸುಷ್ಮಾ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ‌. ವೈದ್ಯರ ನಿರ್ಲಕ್ಷ್ಯ ಬಾಣಂತಿ ಸಾವಿಗೆ ಕಾರಣ ಎಂದು ಸುಷ್ಮಾ ಪತಿ ಹಾಗೂ ಪೋಷಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಗಾಂಧಿ ಚೌಕ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದಾಗ ಮೃತಳ ಸಂಬಂಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ರು. ಸುಷ್ಮಾ ಸಾವಿನ ಕುರಿತು ತನಿಖೆಗೆ ನಡೆಸಲಾಗುವುದು ಎಂದು ಜಿಲ್ಲಾಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

ABOUT THE AUTHOR

...view details