ಕರ್ನಾಟಕ

karnataka

ETV Bharat / state

ಒಂದೇ ದಿನ ಈಶಾನ್ಯ ಕರ್ನಾಟಕ ಸಾರಿಗೆಗೆ 1.5 ಲಕ್ಷ ರೂ. ಗಳಿಕೆ - vijayapur ksrtc

ನಿನ್ನೆ 250 ಬಸ್ ಸಂಚಾರ ನಡೆಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಕೊರೊನಾ ಭೀತಿಯಿಂದ ಪ್ರಯಾಣಿಕರ ಕೊರತೆ ಉಂಟಾಗಿದ್ದರಿಂದ 87 ಬಸ್ ಮಾತ್ರ ರಸ್ತೆಗಿಳಿದವು.‌ ಇವುಗಳಿಂದ 1.5 ಲಕ್ಷ ರೂ. ಆದಾಯ ಬಂದಿದೆ ಎಂದು ವಿಜಯಪುರ ಜಿಲ್ಲೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಎಸ್ ಗಂಗಾಧರ್ ಈಟಿವಿ ಭಾರತಗೆ ತಿಳಿಸಿದ್ದಾರೆ‌.

Karnataka Northeast Transport yesterday collected Rs 1.5 lakh
ನಿನ್ನೆ ಒಂದೇ ದಿನ ಈಶಾನ್ಯ ಕರ್ನಾಟಕ ಸಾರಿಗೆಗೆ 1.5 ಲಕ್ಷ ರೂಪಾಯಿ ಆದಾಯ

By

Published : May 20, 2020, 9:51 PM IST

ವಿಜಯಪುರ:ಪ್ರಯಾಣಿಕರ ಕೊರತೆಯ ನಡುವೆಯೂ ನಿನ್ನೆ (ಮಂಗಳವಾರ)‌ 87 ಬಸ್‌ಗಳು ಓಡಾಟ ನಡೆಸಿದ್ದು, 1.5 ಲಕ್ಷ ರೂ. ಆದಾಯ‌ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಗೆ ಬಂದಿದೆ ಎಂದು ವಿಜಯಪುರ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಎಸ್ ಗಂಗಾಧರ್ ತಿಳಿಸಿದ್ದಾರೆ‌.

ನಿನ್ನೆ 250 ಬಸ್ ಸಂಚಾರ ನಡೆಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಕೊರೊನಾ ಭೀತಿಯಿಂದ ಪ್ರಯಾಣಿಕರ ಕೊರತೆ ಉಂಟಾಗಿದ್ದರಿಂದ 87 ಬಸ್ ಮಾತ್ರ ರಸ್ತೆಗಿಳಿದವು.‌ ಇವುಗಳಿಂದ 1.5 ಲಕ್ಷ ರೂ. ಆದಾಯ ಬಂದಿದೆ ಎಂದು ದೂರವಾಣಿಯಲ್ಲಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.

ವಿಜಯಪುರ ಬಸ್ ನಿಲ್ದಾಣ

ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಬಸ್ ಪ್ರಯಾಣಕ್ಕೆ ಅನುಮತಿ ದೊರೆತ್ತಿದ್ದು, ಹೆಚ್ಚಿನ ಪ್ರಯಾಣಿಕರು ಹೋಗುತ್ತಿದ್ದಾರೆ. ಬೆಳಗ್ಗೆಯಿಂದ‌ 9 ಬಸ್‌ಗಳು ಬೆಂಗಳೂರಿಗೆ ಹೋಗಿವೆ. ಇಂದು ರಾತ್ರಿ ಕೂಡ 3 ಬಸ್‌ಗಳು ಸಂಚರಿಸಲಿದ್ದ, ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ ಎಂದರು.

ABOUT THE AUTHOR

...view details