ಕರ್ನಾಟಕ

karnataka

ETV Bharat / state

ಡಾ.ಆನಂದ ತೇಲ್ತುಂಬ್ಡೆ ಬಿಡುಗಡೆಗೆ ಆಗ್ರಹ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ - protest in vijayapura

ಪ್ರಗತಿಪರ ಚಿಂತಕ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುಟುಂಬದವರಾಗಿರುವ ಡಾ. ಆನಂದ್ ತೇಲ್ತುಂಬ್ಡೆ ಅವರನ್ನು ಗೋವಾ ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿ ಬಂಧನಕ್ಕೆ ಒಳಪಡಿಸಿದೆ. ಹಾಗಾಗಿ, ತಕ್ಷಣ ಅವರನ್ನು ಬಿಡುಗಡೆ‌ ಮಾಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ.

protest in vijayapura
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

By

Published : May 14, 2020, 5:35 PM IST

ವಿಜಯಪುರ:ಕಳೆದ ತಿಂಗಳು ಬಂಧನಕ್ಕೊಳಗಾದ ಪ್ರಗತಿಪರ ಚಿಂತಕ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುಟುಂಬದವರಾಗಿರುವ ಡಾ. ಆನಂದ್ ತೇಲ್ತುಂಬ್ಡೆ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನೆ ನಡೆಸಿ, ಆನಂದ ತೇಲ್ತುಂಬ್ಡೆ ಕಾರ್ಪೊರೇಟ್ ಹುದ್ದೆ ಹೊರತಾಗಿ ಬಡವರ ಪರ ಚಿಂತಕರಾಗಿದ್ದಾರೆ. ಇವರ ಚಿಂತನೆಗಳು ಜನರಿಗೆ ಉಪಯೋಗವಾಗಿವೆ. ಆದ್ರೆ ಉನ್ನತ ಹುದ್ದೆಯಲ್ಲಿದ್ದು, ಜನರಿಗೆ ಸಹಾಯಕ್ಕೆ ಮುಂದಾಗಿರೋದಕ್ಕೆ ಡಾ. ಆನಂದ ಅವರನ್ನು ಗೋವಾ ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿ ಬಂಧನಕ್ಕೆ ಒಳಪಡಿಸಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಆರೋಪಿಸಿದರು.
ಇನ್ನು ಗೋವಾ ಸರ್ಕಾರ ಡಾ. ಆನಂದ್​ ಅವರ ಮೇಲಿನ ಸುಳ್ಳು ಕೇಸ್ ಹಿಂಪಡೆಯಬೇಕು. ಪ್ರಗತಿಪರ ಚಿಂತನೆಗಳನ್ನು ಜನರಿಗೆ ತಿಳಿಸುವ ಕಾರ್ಯಕ್ಕೆ ಮುಂದಾಗಿರುವ ಆನಂದ್​ ಅವರನ್ನು ತಕ್ಷಣವೇ ಬಿಡುಗಡೆ‌ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ABOUT THE AUTHOR

...view details