ಕರ್ನಾಟಕ

karnataka

ETV Bharat / state

ಕೊರೊನಾದಿಂದ 3 ದೇಶಗಳು ಛಿದ್ರ ಛಿದ್ರ, ಭಾರತ ಸುಭದ್ರ: ಕಲ್ಲೂರ ಸಿದ್ಧ ಕಾರ್ಣಿಕ ನುಡಿ - ಕೊರೊನಾ ವೈರಸ್​ ಭೀತಿ

ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ತತ್ತರಿಸಿದೆ. ಪ್ರಪಂಚದ ಮೂರು ದೇಶಗಳು ಈ ಮಾರಣಾಂತಿಕ ವೈರಸ್​​ನಿಂದ ಅಲ್ಲೋಲ ಕಲ್ಲೋಲವಾಗಲಿದ್ದು, ಭಾರತಕ್ಕೆ ಅಪಾಯವಿಲ್ಲ ಎಂದು ಪವಾಡ ಪುರುಷ ಕಲ್ಲೂರಸಿದ್ಧ ಕಾರ್ಣಿಕ ನುಡಿದರು.

India is not in danger
ಕಾರ್ಣಿಕ ನುಡಿ

By

Published : Mar 26, 2020, 8:58 AM IST

ವಿಜಯಪುರ: 56 ದೇಶಗಳಲ್ಲಿ ಮೂರು ದೇಶಗಳು ಮಹಾಮಾರಿ ಕೊರೊನಾ ವೈರಸ್ ಗೆ ಅಲ್ಲೋಲ್ಲ ಕಲ್ಲೋಲವಾಗಲಿವೆ. ಭಾರತಕ್ಕೆ ಆ ಅಪಾಯವಿಲ್ಲ ಎಂದು ಪವಾಡ ಪುರುಷ ಕಲ್ಲೂರಸಿದ್ಧ ಕಾರ್ಣಿಕ ನುಡಿದರು.

ಜಿಲ್ಲೆಯ ಮಕಣಾಪುರ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿಯ ರಾತ್ರಿ ಸೋಮಲಿಂಗ ದೇವಸ್ಥಾನದಲ್ಲಿ ನಡೆಯುವ ಕಾರ್ಣಿಕ ನುಡಿಯಲ್ಲಿ ಈ ಬಾರಿ ಮಹಾಮಾರಿ ಕೊರೊನಾ ರೋಗದ ಭೀಕರತೆ ಬಗ್ಗೆ ಪವಾಡ ಪುರುಷ ಕಲ್ಲೂರುಸಿದ್ಧ ಕಾರ್ಣಿಕ ನುಡಿದು ಚೀನಾ, ಇಟಲಿ, ಇರಾನ್ ದೇಶಗಳು ಇದರ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಲಿವೆ. ಭಾರತವನ್ನು ಕಾಪಾಡುವೆ. ಭೂತಳಾಸಿದ್ಧ (ಶಿವ ಗಣ) ಮೂಲಕ ದೇಶಕ್ಕೆ ಬಂದು ಕಂಟಕವನ್ನು ದೂರ ಮಾಡುವೆ ಎಂದು ನುಡಿದರು.

ಕಾರ್ಣಿಕ ನುಡಿ

ಶಿವನ ಮುಖವಾಡ ಹಾಕಿ ಕೈಯಲ್ಲಿ ತ್ರಿಶೂಲ ಹಿಡಿದು ಕಾರ್ಣಿಕ ನುಡಿಯುವದು ಇಲ್ಲಿಯ ವಿಶೇಷತೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ ಭಾಗದಲ್ಲಿ ಈ ಕಾರ್ಣಿಕ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.

ABOUT THE AUTHOR

...view details