ವಿಜಯಪುರ: ಪ್ರತಿಭಾವಂತ ಹಾಗೂ ಬಡ ಕುಟುಂಬದಲ್ಲಿ ಜನಿಸಿದವರ ಉನ್ನತ ಶಿಕ್ಷಣದ ವೆಚ್ಚ ಭರಿಸಲು ಸದಾ ಸಿದ್ಧವಿರುವುದಾಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.
ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವೆಚ್ಚ ಭರಿಸಲು ಸದಾ ಸಿದ್ಧ: ಶಾಸಕ ನಡಹಳ್ಳಿ
ಎಸ್.ಎಸ್.ಎಲ್.ಸಿ ಯಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಲಕ್ಷ್ಮೀ ಬಸಲಿಂಗಪ್ಪ ಗುರಿಕಾರ ಮನೆಗೆ ಭೇಟಿ ಮಾಡಿ ಅಭಿನಂದಿಸಿದ ಶಾಸಕ ನಡಹಳ್ಳಿ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಲಕ್ಷ್ಮೀ ಬಸಲಿಂಗಪ್ಪ ಗುರಿಕಾರ ಎಸ್.ಎಸ್.ಎಲ್.ಸಿಯಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ಮಾಡಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ನಡಹಳ್ಳಿ ಅವರು ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ತಾಂತ್ರಿಕ ಉನ್ನತ ಕೋರ್ಸ್ಗಳಿಗೆ ಆಯ್ಕೆಯಾಗುವ ಬಡ, ಪ್ರತಿಭಾವಂತ ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರದ ನೆರವಿನೊಂದಿಗೆ ತಾವು ವೈಯಕ್ತಿಕವಾಗಿ ಅವರ ಶಿಕ್ಷಣದ ಮುಂದಿನ ಭವಿಷ್ಯದ ಜವಾಬ್ದಾರಿ ವಹಿಸಿಕೊಳ್ಖುವುದಾಗಿ ತಿಳಿಸಿದರು.