ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್​​ ತೆರವುಗೊಳಿಸಿದ ಪುರಸಭೆ - ಯಲ್ಲಾಲಿಂಗೇಶ್ವರ ದೇವಸ್ಥಾನ

ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ಹಾದು ಮಾರುತಿ ನಗರದ ಯಲ್ಲಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಅಕ್ಕಪಕ್ಕದಲ್ಲಿನ ಅಕ್ರಮವಾಗಿ ಕಟ್ಟಲಾಗಿದ್ದ ಕಾಂಪೌಂಡ್​ಗಳನ್ನು ತೆರವುಗೊಳಿಸಲಾಯಿತು.

illegally-built-compound-cleared-municipality
ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್​​ ತೆರವುಗೊಳಿಸಿದ ಪುರಸಭೆ

By

Published : Oct 13, 2020, 7:23 PM IST

ಮುದ್ದೇಬಿಹಾಳ (ವಿಜಯಪುರ): ಪಟ್ಟಣದ ಮಾರುತಿ ನಗರದಲ್ಲಿ ರಸ್ತೆ ಕಾಮಗಾರಿ ನಿರ್ಮಾಣದ ಸಲುವಾಗಿ ಅತಿಕ್ರಮಣವಾದಂತಹ ಕಟ್ಟಡದ ಕಂಪೌಂಡ್‌ಗಳನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಸಮ್ಮುಖದಲ್ಲಿ ಪುರಸಭೆ ಸಿಬ್ಬಂದಿ ರಸ್ತೆ ಮುಂದಿನ ಮನೆಗಳ ಕಾಂಪೌಂಡ್‌ಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು. ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ಹಾದು ಮಾರುತಿ ನಗರದ ಯಲ್ಲಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಅಕ್ಕಪಕ್ಕದಲ್ಲಿನ ಅಕ್ರಮವಾಗಿ ಕಟ್ಟಲಾಗಿದ್ದ ಕಾಂಪೌಂಡ್​ಗಳನ್ನು ತೆರವುಗೊಳಿಸಲಾಯಿತು.

ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್​​ ತೆರವುಗೊಳಿಸಿದ ಪುರಸಭೆ

ಜೆಡಿಎಸ್ ನಾಯಕಿ ಮನೆ ಕಂಪೌಂಡ್ ತೆರವು

ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ ಅವರ ಹಳೆಯ ಮನೆಯ ಕಾಂಪೌಂಡನ್ನು ಪುರಸಭೆಯಿಂದ ತೆರವುಗೊಳಿಸಲಾಯಿತು. ವಾರ್ಡ್​​ನ ಅಭಿವೃದ್ಧಿ ಕೆಲಸಗಳಿಗೆ ತಾವು ಸಹಕಾರ ನೀಡುವುದಾಗಿ ಮುಖಂಡ ಶಾಂತಗೌಡ ಬಿರಾದಾರ ಇದೇ ವೇಳೆ ತಿಳಿಸಿದರಲ್ಲದೇ ಸ್ವತಃ ತಾವೇ ಮುಂದೆ ನಿಂತು ತಮ್ಮ ಮನೆಯ ಕಂಪೌಂಡ್​​​ ತೆರವಿಗೆ ಸಹಕಾರ ನೀಡಿದರು.

ಇತ್ತೀಚಿಗೆ ಪಟ್ಟಣದ ಅಭಿವೃದ್ಧಿಗೆ ನಾಗರಿಕರು ಸಹಕಾರ ನೀಡುವಂತೆ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಮಾರುತಿ ನಗರದ ನಿವಾಸಿಗಳಲ್ಲಿ ಮನವಿ ಮಾಡಿದ್ದರು.

ಈ ವೇಳೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾತನಾಡಿ, ಎಸ್‌ಎಫ್‌ಸಿ ಅನುದಾನದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗುತ್ತಿದ್ದು, ಅಕ್ಕಪಕ್ಕದಲ್ಲಿ ಚರಂಡಿ ಮಾಡಿದ ಬಳಿಕ ರಸ್ತೆ ನಿರ್ಮಿಸಲಾಗುತ್ತದೆ. ಸದ್ಯಕ್ಕೆ ಅತಿಕ್ರಮಣ ತೆರವುಗೊಳಿಸಿ ಚರಂಡಿ ಕಾಮಗಾರಿ ಮಾಡಲಾಗುತ್ತದೆ ಎಂದರು.

ABOUT THE AUTHOR

...view details