ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ ಮೀಸಲಾತಿಯಲ್ಲಿ ಅಕ್ರಮ ಆರೋಪ: ಮುದ್ದೇಬಿಹಾಳದಲ್ಲಿ ಮರುಚುನಾವಣೆಗೆ ಆಗ್ರಹ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೀಸಲಾತಿ ಪುನರಾವರ್ತನೆಯಾಗಿರುವುದು ಹಾಗೂ ವಾರ್ಡ್​​ಗಳಲ್ಲಿ ವ್ಯತ್ಯಾಸವಾಗಿರುವ ಹಿನ್ನೆಲೆ ಮತ್ತೆ ಚುನಾವಣೆ ನಡೆಸಬೇಕು ಎಂದು ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ.

dsd
ಗ್ರಾಪಂ ಚುನಾವಣೆ ಮೀಸಲಾತಿಯಲ್ಲಿ ಅಕ್ರಮ ಆರೋಪ

By

Published : Jan 21, 2021, 8:30 PM IST

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಪಂಗೆ ಸಂಬಂಧಿಸಿದಂತೆ ಎರಡು ವಾರ್ಡ್​​ಗಳಲ್ಲಿ ಮೀಸಲಾತಿ ಪುನರಾವರ್ತನೆಯಾಗಿರುವುದು ಹಾಗೂ ವಾರ್ಡ್​​ಗಳಲ್ಲಿ ವ್ಯತ್ಯಾಸವಾಗಿರುವ ಕುರಿತಂತೆ ಪರಿಶೀಲನೆ ನಡೆಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಹೇಳಿದ್ದಾರೆ.

ಗ್ರಾಪಂ ಚುನಾವಣೆ ಮೀಸಲಾತಿಯಲ್ಲಿ ಅಕ್ರಮ ಆರೋಪ

ಬಿದರಕುಂದಿ ಗ್ರಾಮ ಪಂಚಾಯಿತಿಯಲ್ಲಿ 2015ರಲ್ಲಿ ಹಾಗೂ ಈ ಸಲದ ಚುನಾವಣೆಯ ವೇಳೆ ಪಂಚಾಯಿತಿಯ ವಾರ್ಡ್​ ಸಂಖ್ಯೆ ಒಂದು ಮತ್ತು ಮೂರನೇ ವಾರ್ಡ್​​ನಲ್ಲಿ ಮೀಸಲಾತಿ ಪುನರಾವರ್ತನೆಯಾಗಿದೆ ಎಂದು ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಇನ್ನೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತದೆ. ಆಯೋಗದಿಂದ ಬರುವ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಅರ್ಜಿದಾರ ವಕೀಲ ಜಿ.ಎಸ್.ಬಿಜ್ಜೂರ ಮಾತನಾಡಿ, ಬಿದರಕುಂದಿಯ ಮತಕ್ಷೇತ್ರಗಳು ಅದಲು ಬದಲಾಗಿದ್ದು ಮತದಾರರು ಮಾತ್ರ ಅದೇ ವಾರ್ಡ್​ನವರಾಗಿದ್ದಾರೆ. ಅಲ್ಲದೇ 2015ರ ಮೀಸಲಾತಿಯನ್ನು 2020ಕ್ಕೂ ಮುಂದುವರೆಸಿದ್ದಾರೆ. ಕೆಲವು ರಾಜಕಾರಣಿಗಳ ಮಾತು ಕೇಳಿಕೊಂಡು ಚುನಾವಣೆಯನ್ನು ಅಕ್ರಮವಾಗಿ ನಡೆಸಿದ್ದು, ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details