ವಿಜಯಪುರ :ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ನಗರದಲ್ಲಿ ಕೇಳಿ ಬಂದಿದೆ. ಪತ್ನಿಯನ್ನು ಕೊಲೆ ಮಾಡಿ ನಂತರ ನೇಣಿಗೆ ಹಾಕಿದ್ದಾನೆಂದು ಮೃತ ಗೃಹಿಣಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ವಿಜಯಪುರ : ಪತಿಯಿಂದಲೇ ಪತ್ನಿಯ ಕೊಲೆ ಆರೋಪ - vijayapur
ಪತ್ನಿಯನ್ನು ಕೊಲೆ ಮಾಡಿ ನಂತರ ನೇಣಿಗೆ ಹಾಕಿದ್ದಾನೆಂದು ಮೃತ ಗೃಹಿಣಿಯ ಕುಟುಂಬಸ್ಥರು ಆರೋಪಿಸಿದ್ದಾರೆ..
ಸುನಿತಾ ಕಾಪ್ಸೆ
ಸುನಿತಾ ಕಾಪ್ಸೆ (31) ಎಂಬುವರು ಮೃತ ಗೃಹಿಣಿ. ಪತಿ ಪ್ರದೀಪ್ ಕಾಪ್ಸೆ ಎಂಬಾತ ಆಕೆಯನ್ನು ಕೊಂದು ನೇಣಿಗೆ ಹಾಕಿ ಪರಾರಿಯಾಗಿದ್ದಾನೆ ಎಂದು ಸುನಿತಾ ಕುಟುಂಬಸ್ಥರು ಆರೋಪಿಸಿದಾರೆ.
ಜತೆಗೆ ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರುಆಗ್ರಹಿಸಿದ್ದಾರೆ. ಸ್ಥಳಕ್ಕೆ ಗೋಲಗುಮ್ಮಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.