ಕರ್ನಾಟಕ

karnataka

ETV Bharat / state

ಹಿಜಾಬ್ ವಿವಾದ: ಫೆ. 26ರ ವರೆಗೆ ವಿಜಯಪುರದಲ್ಲಿ ನಿಷೇಧಾಜ್ಞೆ ಮುಂದುವರಿಕೆ - section 144 continue in Vijayapura

ಹಿಜಾಬ್ ವಿವಾದ ಬಗೆಹರಿಯದ ಕಾರಣ ನಿಷೇಧಾಜ್ಞೆಯನ್ನು ಇಂದಿನಿಂದ ಫೆ. 26 ರ ವರೆಗೆ ವಿಸ್ತರಣೆ ಮಾಡಿ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ನಿಷೇಧಾಜ್ಞೆ  ಮುಂದುವರಿಕೆ
ವಿಜಯಪುರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ

By

Published : Feb 21, 2022, 7:24 AM IST

Updated : Feb 21, 2022, 7:43 AM IST

ವಿಜಯಪುರ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.‌

ಫೆಬ್ರವರಿ 19ರ ವರೆಗಿದ್ದ ನಿಷೇಧಾಜ್ಞೆಯನ್ನು ಇಂದಿನಿಂದ ಫೆ. 26 ರ ವರೆಗೆ ವಿಸ್ತರಿಸಲಾಗಿದೆ. ಶಾಲಾ-ಕಾಲೇಜುಗಳ ಆವರಣದ ಸುತ್ತಲು ಪ್ರತಿಬಂಧಕಾಜ್ಞೆ ಇದ್ದು, 200 ಮೀಟರ್ ನಿಷೇಧಿತ ಪ್ರದೇಶದಲ್ಲಿ ಯಾರೂ ಕೂಡಾ ಅನಗತ್ಯವಾಗಿ ಓಡಾಡಬಾರದು ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ, ಪೊಲೀಸ್​ ಬಿಗಿ ಭದ್ರತೆ

ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗು ಪೊಲೀಸರನ್ನು ಹೊರತುಪಡಿಸಿ ಉಳಿದವರಿಗೆ ಶಾಲಾ-ಕಾಲೇಜು​ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.‌ ಸಂಘಟನಾಕಾರರು, ಸಾರ್ವಜನಿಕರು ಪ್ರತಿಭಟನೆ ಅಥವಾ ಮೆರವಣಿಗೆ ಮಾಡಲು ಪ್ರಯತ್ನಿಸಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Last Updated : Feb 21, 2022, 7:43 AM IST

ABOUT THE AUTHOR

...view details