ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಕೋಟಿ ವೃಕ್ಷ ಅಭಿಯಾನ.. ಎಂ ಬಿ ಪಾಟೀಲ್‌ರ ಕನಸಿನಂತೆ ಬೃಹತ್‌ ಹಸಿರು ಕ್ರಾಂತಿ..

ಕೃಷ್ಣಾ ಜಲ ನಿಗಮ ಮಂಡಳಿಯಿಂದ ಸಸಿಗಳನ್ನು ಪಡೆದು ಅವುಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸೋಲಾರ ಅಳವಡಿಸಿ ಹನಿ ನೀರಾವರಿ ಮಾಡಲು ಬೇಕಿರುವ ವಿದ್ಯುತ್‌ನ ಸಹ ಪಡೆದು ದೇಶಕ್ಕೆ ಮಾದರಿಯಾಗಿದ್ದಾರೆ.

Green revolution in vijayapura district
ವಿಜಯಪುರ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಬೃಹತ್‌ ಹಸಿರು ಕಾಂತ್ರಿ

By

Published : Jun 5, 2020, 5:26 PM IST

Updated : Jun 5, 2020, 9:44 PM IST

ವಿಜಯಪುರ :ಬರದ ನಾಡು ಎಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ಸದ್ದಿಲ್ಲದೇ ಹಸಿರು ಕ್ರಾಂತಿ ಮೊಳಕೆಯೊಡೆಯುತ್ತಿದೆ. ನಗರದ ಹೊರವಲಯದ ಭೂತನಾಳ ಕೆರೆ ಪಕ್ಕದ ಪ್ರದೇಶದಲ್ಲಿ ಸುಮಾರು 540 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಕಾರ್ಯ ನಡೆಯುತ್ತಿದೆ.

ಈಗಾಗಲೇ 60 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸುತ್ತಿದ್ದು, ಇದಕ್ಕೆ ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಬೃಹತ್‌ ಹಸಿರು ಕಾಂತ್ರಿ..

ಈ ಹಿಂದೆ ಟ್ಯಾಂಕರ್ ಮೂಲಕ ನೀರು ಹಾಕಿ ಸಸಿಗಳನ್ನು ಬೆಳೆಸಲಾಗಿತ್ತು. ಆದರೆ, ಈಗ ಹನಿ ನೀರಾವರಿ ಮೂಲಕ ಹೊಸ ತಂತ್ರಜ್ಞಾನದಿಂದ ನೀರುಣಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹಸಿರುಕ್ರಾಂತಿ ತರಲು ಅಂದಿನ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಅರಣ್ಯ ಇಲಾಖೆ ಜತೆ ಕೈ ಜೋಡಿಸಿ 540 ಎಕರೆ ಸರ್ಕಾರಿ ಭೂಮಿಯಲ್ಲಿ 2017-18ರಲ್ಲಿ ಮರ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇದಕ್ಕೆ ಕೋಟಿ ವೃಕ್ಷ ಅಭಿಯಾನ ಎಂದು ನಾಮಕರಣ ಮಾಡಿ ಕಾರ್ಯ ಆರಂಭಿಸಿದ್ದರು.

ಕೃಷ್ಣಾ ಜಲ ನಿಗಮ ಮಂಡಳಿಯಿಂದ ಸಸಿಗಳನ್ನು ಪಡೆದು ಅವುಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸೋಲಾರ ಅಳವಡಿಸಿಹನಿ ನೀರಾವರಿ ಮಾಡಲು ಬೇಕಿರುವ ವಿದ್ಯುತ್‌ನ ಸಹ ಪಡೆದು ದೇಶಕ್ಕೆ ಮಾದರಿಯಾಗಿದ್ದಾರೆ. ಮಳೆಗಾಲದಲ್ಲಿ ಗಿಡ, ಮರಗಳು ಸುಲಭವಾಗಿ ಬೆಳೆಯುತ್ತವೆ. ಆದರೆ, ಬೇಸಿಗೆಯಲ್ಲಿ ಈ ಮರಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಇದಕ್ಕಾಗಿ ಹನಿ ನೀರಾವರಿ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. 7 ಕೋಟಿ ರೂ. ವೆಚ್ಚದಲ್ಲಿ 60 ಸಾವಿರ ಮರಗಳನ್ನು ಬೆಳೆಸಲಾಗುತ್ತಿದೆ. ಅಷ್ಟೇ ಅಲ್ಲ, ಅರಣ್ಯ ಪ್ರದೇಶದ ಸುತ್ತಮುತ್ತ 17 ಕಿ.ಮೀ. ವರೆಗೆ ತಂತಿ ಬೇಲಿ ಮೂಲಕ ಗಡಿ ಹಾಕಲಾಗಿದೆ.

ಈ ಅರಣ್ಯ ಪ್ರದೇಶದಲ್ಲಿ ಪಕ್ಷಿಗಳು ಗೂಡು ಕಟ್ಟಿಕೊಳ್ಳಲು ಬಿದರಿನ ಮರಗಳನ್ನು ಬೆಳೆಸಲಾಗಿದೆ. ಆಲದ ಮರ, ಅರಳಿ, ಬಸರಿ, ಹೊಂಗೆ, ಬೇವು ಸೇರಿ ಬಹುಪಯೋಗಿ ಮರಗಳನ್ನು ಬೆಳೆಸಲಾಗುತ್ತದೆ. ಆಲಮಟ್ಡಿ ಜಲಾಶಯದ ಎತ್ತರವನ್ನು ಈಗಿರುವ 519.60 ದಿಂದ 524.256 ಮೀಟರ್‌ಗೆ ಎತ್ತರಿಸಬೇಕಾಗಿದೆ. ಈ ವೇಳೆ ಸಾವಿರಾರು ಎಕರೆ ಅರಣ್ಯ ಭೂಮಿ ಕೊಚ್ಚಿ ಹೋಗುವ ಸಾಧ್ಯತೆ ಇರುವ ಕಾರಣ ಇದಕ್ಕೆ ಬದಲಿಯಾಗಿ ಈ ಅರಣ್ಯ ಪ್ರದೇಶ ಬೆಳೆಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶ ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಸಂಶಯವಿಲ್ಲ.

Last Updated : Jun 5, 2020, 9:44 PM IST

ABOUT THE AUTHOR

...view details