ವಿಜಯಪುರ:ದೇಶ, ವಿದೇಶಗಳಲ್ಲಿ ತನ್ಮದೇಯಾದ ಛಾಪು ಮೂಡಿಸಿರುವ ಬರದ ನಾಡಿನ ಬಂಗಾರ ದ್ರಾಕ್ಷಿ ಹವಾಮಾನ ವೈಪರೀತ್ಯಗಳಿಂದ ಬೆಳೆಗಾರ ನಷ್ಟದ ಹಾದಿ ತುಳಿಯುವಂತಾಗಿದೆ.
ತೋಟಗಾರಿಕೆ ಬೆಳೆಯಾದ ದ್ರಾಕ್ಷಿ ಹಣ್ಣು ಬಿಡುವಾಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಹವಾಮಾನ ವೈಪರೀತ್ಯ ಉಂಟಾದ ಕಾರಣ ದ್ರಾಕ್ಷಿಗೆ ಗೊನೆ ಕರಗುವಿಕೆ, ಕಾಯಿ ಉದುರುವಿಕೆ, ಗೊಂಚಲುಗಳಿಗೆ ಕೊಳೆ ರೋಗ, ಬೂಜು ರೋಗ, ಬೂದಿ ರೋಗ ಸೇರಿದಂತೆ ವಿವಿಧ ರೋಗ ಅಂಟಿಕೊಂಡಿವೆ. ಪರಿಣಾಮ ದ್ರಾಕ್ಷಿ ಹಣ್ಣು ಮಾಗುವ ಮುನ್ನವೇ ಉದುರುತ್ತಿದ್ದು, ಬೆಳೆಗಾರ ಕಂಗಾಲಾಗಿದ್ದಾನೆ.
ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ: ಸಿಎಂ ಬೊಮ್ಮಾಯಿ
ಜಿಲ್ಲೆಯಲ್ಲಿ ಪ್ರತಿ ವರ್ಷ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಕನಿಷ್ಟ 18ಸಾವಿರ ಹೆಕ್ಟೇರ್ ದ್ರಾಕ್ಷಿ ಉತ್ತಮ ಫಸಲು ನೀಡುತ್ತದೆ. ಇದನ್ನು ನಂಬಿಕೊಂಡು ಎಪಿಎಂಸಿ ಅದರ ಒಣ ದ್ರಾಕ್ಷಿಯನ್ನು ಹರಾಜು ಮೂಲಕ ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದೆ. ಆದರೆ, ಈ ಬಾರಿ ಇನ್ನೇನು ದ್ರಾಕ್ಷಿ ಬೆಳೆಗೆ ಕೈಗೆ ಬರುವಾಗಲೇ ಹವಾಮಾನ ವೈಪರೀತ್ಯದಿಂದ ವಿವಿಧ ರೋಗ ತಗುಲಿದ ಪರಿಣಾಮ ಶೇ. 50ರಷ್ಟು ಬೆಳೆ ಉಪಯೋಗಕ್ಕೆ ಬರದಾಗಿದೆ.
ಜಿಲ್ಲೆಯಲ್ಲಿ ಹಾನಿಗೊಳಗಾದ ದ್ರಾಕ್ಷಿ ಬೆಳೆಗಾರರ ಸಹಾಯಕ್ಕೆ ಸರ್ಕಾರ ಬರಬೇಕು ಎಂದು ದ್ರಾಕ್ಷಿ ಬೆಳೆಗಾರರು ಒತ್ತಾಯಿಸಿದ್ದಾರೆ. ಬೆಳೆಗಾರರ ಹಾಗೂ ತೋಟಗಾರಿಕೆ ಬೆಳೆಗಳ ನಷ್ಟ ಸರಿದೂಗಿಸಲು ರೈತರು ಮಾಡಿದ ಮನವಿಗೆ ಜಿಲ್ಲಾಡಳಿತ ಸಹ ಸ್ಪಂದಿಸಿದೆ. ವಿಶೇಷ ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ, ಸರ್ಕಾರ ಆಯಾ ಇಲಾಖೆಗಳಿಂದಲೇ ಪರಿಹಾರ ದೊರಕಿಸಿಕೊಂಡುವಂತೆ ವಾಪಸ್ ಪತ್ರ ಕಳುಹಿಸಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ವಿವಿಧ ಬೆಳೆ, ಪ್ರವಾಹ ಸಂದರ್ಭದಲ್ಲಿ ಯಾವ ರೀತಿ ಸ್ಪಂದಿಸುತ್ತದೆ ಅದೇ ರೀತಿ ದ್ರಾಕ್ಷಿ ಬೆಳೆಗಾರರ ಸಮಸ್ಯೆಗೂ ಸ್ಪಂದಿಸಬೇಕು. ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲಿಯೇ ನಷ್ಟವಾದ ದ್ರಾಕ್ಷಿ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ದ್ರಾಕ್ಷಿ ಬೆಳೆಗಾರರ ಒತ್ತಾಯವಾಗಿದೆ.
ರೋಗಗಳ ಆತಂಕದಲ್ಲಿ ದ್ರಾಕ್ಷಿ ಬೆಳೆಗಾರರು ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬರದನಾಡು ಎಂದು ಖ್ಯಾತಿ ಹೊಂದಿದ್ದರೂ ತೋಟಗಾರಿಕೆ ಬೆಳೆಗಳಿಗೆ ಜಿಲ್ಲೆ ತನ್ನದೇ ಛಾಪು ಮೂಡಿಸಿದೆ. ನಿಂಬೆ ಹಣ್ಣು, ದ್ರಾಕ್ಷಿ, ದಾಳಿಂಬೆ ಸೇರಿದಂತೆ ಇನ್ನಿತರ ಹಣ್ಣು ಬೆಳೆದು ದೇಶ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಆದರೆ, ಪ್ರತಿ ವರ್ಷ ಪ್ರವಾಹ, ಬರಗಾಲ, ಹವಾಮಾನ ವೈಪರೀತ್ಯಗಳಿಂದ ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೇ ಅನ್ನದಾತ ಸಂಕಷ್ಟ ಅನುಭವಿಸುತ್ತಿದ್ದಾನೆ. ಇವರ ಸಹಾಯಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಕೆಲಸ ಮಾಡಬೇಕಾಗಿದೆ.