ವಿಜಯಪುರ: ಗ್ರಾಮ ಪಂಚಾಯತ್ ಉಪಾಧ್ಯಕ್ಷನನ್ನು ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ಲಿನ ಬಿ.ಕೆ. ಗ್ರಾಮದಲ್ಲಿ ನಡೆದಿದೆ.
ಸಿಂದಗಿ: ಕೊಡಲಿಯಿಂದ ಕೊಚ್ಚಿ ಗ್ರಾ.ಪಂ ಉಪಾಧ್ಯಕ್ಷನ ಭೀಕರ ಹತ್ಯೆ - ಸಿಂದಗಿಯಲ್ಲಿ ಗ್ರಾ. ಪಂ ಉಪಾಧ್ಯಕ್ಷನ ಭೀಕರ ಹತ್ಯೆ
ಗ್ರಾಮ ಪಂಚಾಯತ್ ಉಪಾಧ್ಯಕ್ಷನನ್ನು ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ಲಿನ ಬಿ.ಕೆ. ಗ್ರಾಮದಲ್ಲಿ ನಡೆದಿದೆ.
ಕೊಡಲಿಯಿಂದ ಕೊಚ್ಚಿ ಗ್ರಾ. ಪಂ ಉಪಾಧ್ಯಕ್ಷನ ಭೀಕರ ಹತ್ಯೆ
ಶರಣಪ್ಪ ಗುರಪ್ಪ ಪುಟಾಣಿ(55) ಕೊಲೆಯಾದ ವ್ಯಕ್ತಿ. ಯರಗಲ್ ಗ್ರಾ.ಪಂ ಉಪಾಧ್ಯಕ್ಷನಾಗಿದ್ದ ಶರಣಪ್ಪ ಮನೆ ಮುಂದಿನ ತಗಡಿನ ಶೆಡ್ನಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಮನೆ ಪಕ್ಕದ ಖಾಲಿ ಜಾಗದಲ್ಲಿ ಕೊಲೆಗೆ ಬಳಸಿದ ಕೊಡಲಿ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.