ಕರ್ನಾಟಕ

karnataka

ETV Bharat / state

ವಿಜಯಪುರ : ದರೋಡೆಕೋರರನ್ನು ಶಸ್ತ್ರಾಸ್ತ್ರ ಸಮೇತ ಬಂಧಿಸಿದ ಪೊಲೀಸರು - ವಿಜಯಪುರದಲ್ಲಿ ದರೋಡೆಕೋರರ ಬಂಧನ

ಬಂಧಿತರಿಂದ ಒಂದು ಕಂಟ್ರಿ ಪಿಸ್ತೂಲ್, ಎರಡು ಕಬ್ಬಿಣ ಲಾಂಗ್, ಹಗ್ಗ, ಬಡಿಗೆ, ಎರಡು ಬೈಕ್, ಖಾರದ ಪುಡಿ ವಶಕ್ಕೆ ಪಡೆದಿದ್ದಾರೆ.‌ ಝಳಕಿ ಪಿಎಸ್​ಐ ಪರಶುರಾಮ ಮನಗೂಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ..

gangsters-arrested-by-police-in-vijayapura
ದರೋಡೆಕೋರರನ್ನು ಶಸ್ತ್ರಾಸ್ತ್ರ ಸಮೇತ ಬಂಧಿಸಿದ ಪೊಲೀಸರು

By

Published : Jan 19, 2022, 4:41 PM IST

ವಿಜಯಪುರ :ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ದರೋಡೆಕೋರರನ್ನು ಶಸ್ತ್ರಾಸ್ತ್ರ ಸಮೇತ ಬಂಧಿಸುವಲ್ಲಿ ಝಳಕಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ದರೋಡೆಗೆ ಹೊಂಚು ಹಾಕಿದ್ದ ತಂಡದ ಚಲನವಲನ ಗಮನಿಸಿದ ಪೊಲೀಸರು ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಆಗ ದರೋಡೆ ನಡೆಸಲು ಹೊಂಚು ಹಾಕುತ್ತಿರುವ ಸತ್ಯ ಬಯಲಿಗೆ ಬಂದಿದೆ.

ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಇಮ್ರಾನ್ ತಿಳಗೊಳ, ಕುಮಾರ್ ರಾಠೋಡ್, ಸೂರಜ್ ಗಾಯಕವಾಡ್, ಕರ್ಣ ಉರ್ಫ್ ಶರತ್ ಪವಾರ್, ಸ್ವಪ್ನಿಲ್ ಲಕಡೆ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಒಂದು ಕಂಟ್ರಿ ಪಿಸ್ತೂಲ್, ಎರಡು ಕಬ್ಬಿಣ ಲಾಂಗ್, ಹಗ್ಗ, ಬಡಿಗೆ, ಎರಡು ಬೈಕ್, ಖಾರದ ಪುಡಿ ವಶಕ್ಕೆ ಪಡೆದಿದ್ದಾರೆ.‌ ಝಳಕಿ ಪಿಎಸ್​ಐ ಪರಶುರಾಮ ಮನಗೂಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಝಳಕಿ, ಚಡಚಣ ಸುತ್ತಮುತ್ತ ಹಲವು ದಿನಗಳಿಂದ ರಾತ್ರಿ ಹೊತ್ತು ದರೋಡೆಕೋರರು ರಸ್ತೆಯಲ್ಲಿ ಹೋಗುವವರನ್ನು ಹಾಗೂ ಮನೆಗಳಿಗೆ ನುಗ್ಗಿ ದರೋಡೆ ನಡೆಸುತ್ತಿದ್ದರು. ದರೋಡೆಕೋರರ ಬಂಧನದಿಂದ ಜನರು ನಿಟ್ಟುಸಿರು ಬಿಟ್ಟಂತಾಗಿದೆ.

ಓದಿ:ಡ್ರಗ್ಸ್ ಮಾರಾಟ : ನೈಜಿರಿಯಾ ಪ್ರಜೆ‌ ಸೇರಿ ನಾಲ್ವರ ಬಂಧನ

ABOUT THE AUTHOR

...view details