ಕರ್ನಾಟಕ

karnataka

ETV Bharat / state

ಬಡವರ ಪಾಲಿಗೆ ದಾಸೋಹ ಕೇಂದ್ರವಾಯ್ತು ಇಂದಿರಾ ಕ್ಯಾಂಟೀನ್​ - Indira Canteen in Vijayapur

ಲಾಕ್​ಡೌನ್​ ಹಿನ್ನೆಲೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು ಇಂದಿರಾ ಕ್ಯಾಂಟೀನ್​ನಲ್ಲಿ ನಿರಾಶ್ರಿತರು, ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದರಿಂದ ಬಡವರಿಗೆ ಇದು ಅನ್ನ ದಾಸೋಹದ ಕೇಂದ್ರವಾಗಿದೆ.

ಬಡವರ ಪಾಲಿಗೆ ಅನ್ನದಾಸೋಹ ಕೇಂದ್ರವಾದ ಇಂದಿರಾ ಕ್ಯಾಂಟೀನ್​
ಬಡವರ ಪಾಲಿಗೆ ಅನ್ನದಾಸೋಹ ಕೇಂದ್ರವಾದ ಇಂದಿರಾ ಕ್ಯಾಂಟೀನ್​

By

Published : May 27, 2021, 7:40 PM IST

ವಿಜಯಪುರ: ಲಾಕ್​ಡೌನ್​ ಹಿನ್ನೆಲೆ ಕೂಲಿ, ಕಾರ್ಮಿಕರ ಬದುಕು ದುಸ್ಥರವಾಗಿದೆ. ಆದರೆ, ರಾಜ್ಯ ಸರ್ಕಾರ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್​ನಿಂದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ.

ಬಡವರ ಪಾಲಿಗೆ ಅನ್ನದಾಸೋಹ ಕೇಂದ್ರವಾದ ಇಂದಿರಾ ಕ್ಯಾಂಟೀನ್​

ನಗರದಲ್ಲಿ ಇರುವ ನಾಲ್ಕು ಕ್ಯಾಂಟೀನ್‍ನಲ್ಲಿ ಉಚಿತ ತಿಂಡಿ, ಊಟ ನೀಡುತ್ತಿರುವ ಕಾರಣ ನಿತ್ಯ 500ಕ್ಕೂ ಹೆಚ್ಚು ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದವರಿಗೆ ಕಳೆದ 7 ತಿಂಗಳಿಂದ ಬಾಕಿ ಹಣ ಬರದಿದ್ದರೂ ಮಾನವೀಯತೆ ದೃಷ್ಟಿಯಿಂದ ಊಟ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಸರ್ಕಾರ ಬಡವರಿಗಾಗಿ ಕೇವಲ ಪ್ಯಾಕೇಜ್ ಘೋಷಿಸಿದರೆ ಸಾಲದು ಎಂದು ಇಂದಿರಾ ಕ್ಯಾಂಟಿನ್‍ ಬಳಸಿಕೊಂಡು ಬಡವರಿಗೆ ಊಟದ ವ್ಯವಸ್ಥೆ ಮಾಡಿದೆ. ನಗರದ ನಾಲ್ಕು ಕೇಂದ್ರದಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದೆ. ಈ ಹಿಂದೆ ಕ್ಯಾಂಟಿನ್‍ಗೆ 250-300 ಜನ ಬರುತ್ತಿದ್ದರು. ಈಗ 500ಕ್ಕಿಂತ ಹೆಚ್ಚು ಜನ ಊಟಕ್ಕೆ ಬರುತ್ತಿದ್ದಾರೆ. ಎಷ್ಟೇ ಜನ ಬರಲಿ ಅವರಿಗೆ ಉಚಿತ ಊಟದ ವ್ಯವಸ್ಥೆ ಮಾಡುವುದಾಗಿ ಕ್ಯಾಂಟೀನ್​ ವ್ಯವಸ್ಥಾಪಕ ಕೃಷ್ಣ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಓದಿ:ಮೇಕೆದಾಟು ಯೋಜನೆ ವಿವಾದ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ

ABOUT THE AUTHOR

...view details