ಕರ್ನಾಟಕ

karnataka

ETV Bharat / state

ಅಕ್ರಮ ವಹಿವಾಟು ಆರೋಪ: ನಾಲ್ವರು ಪ್ರಭಾವಿ ಶಿಕ್ಷಕರ ಅಮಾನತಿಗೆ ಸೂಚನೆ

ನಾಲ್ಕು ಜನ ಪ್ರಭಾವಿ ಶಿಕ್ಷಕರ ಅಮಾನತು ಮಾಡಿ ಧಾರವಾಡ ಶಿಕ್ಷಣ ಇಲಾಖೆ ಅಪರಾಧ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ್​ ವಿಜಯಪುರ ಡಿಡಿಪಿಐಗೆ ಸೂಚನೆ ನೀಡಿದ್ದಾರೆ.

By

Published : Jul 27, 2019, 7:02 AM IST

ವಿಜಯಪುರದ ನಾಲ್ವರು ಪ್ರಭಾವಿ ಶಿಕ್ಷಕರ ಅಮಾನತು..!

ವಿಜಯಪುರ:ಜಿಲ್ಲೆಯ ನಾಲ್ಕು ಪ್ರಭಾವಿ ಶಿಕ್ಷಕರನ್ನು ಅಮಾನತು ಮಾಡಲು ಧಾರವಾಡ ಶಿಕ್ಷಣ ಇಲಾಖೆ ಅಪರಾಧ ಆಯುಕ್ತರು, ಆಡಳಿತ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಖಜಾಂಚಿ ಜುಬೇರ ಕೆರೂರ, ಜಿಒಸಿಸಿ ಬ್ಯಾಂಕ್ ಅಧ್ಯಕ್ಷ ಅರ್ಜುನ ಲಮಾಣಿ, ಉಪಾಧ್ಯಕ್ಷ ಹಣಮಂತ ಎನ್. ಕೊಣದಿ ಎಂಬುವರ ಅಮಾನತಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ನೌಕರರ ಸಹಕಾರಿ (ಜಿಒಸಿಸಿ) ಬ್ಯಾಂಕ್​​ನಲ್ಲಿ ಅಕ್ರಮ ವಹಿವಾಟು ನಡೆಸಿದ ಆರೋಪದ ಮೇಲೆ ಅಮಾನತು ಮಾಡಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಜಯಪುರದ ನಾಲ್ವರು ಪ್ರಭಾವಿ ಶಿಕ್ಷಕರ ಅಮಾನತು..!

ಶಾಲೆಗೆ ಅನಧಿಕೃತ ಗೈರು ಆರೋಪ, 2016 ರ ನಂತರ ಹಣಕಾಸಿನ ಮೂಲ ಲೆಕ್ಕಪತ್ರ ಸಲ್ಲಿಸದ ಕಾರಣ ಈ ನಾಲ್ವರು ಶಿಕ್ಷಕರನ್ನು ಅಮಾನತು ಮಾಡಿ, ವಿಚಾರಣೆ ನಡೆಸಲು ಆಡಳಿತ ಉಪನಿರ್ದೇಶಕರಿಗೆ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಆದೇಶ ಮಾಡಿದ್ದಾರೆ.

ABOUT THE AUTHOR

...view details