ಕರ್ನಾಟಕ

karnataka

By

Published : Dec 3, 2021, 6:37 PM IST

ETV Bharat / state

ಸಚಿವ ಕಾರಜೋಳ ಬಿಜೆಪಿ ಲೇಬಲ್​​​ ಬಿಟ್ಟು ಆರಿಸಿ ಬರಲಿ ನೋಡೋಣ: ಕಾಂಗ್ರೆಸ್​ ನಾಯಕರ ಸವಾಲು

ಕಾರಜೋಳರು ತಮ್ಮ ಪಕ್ಷದ ಲೇಬಲ್ ತೆಗೆದು ಹಾಕಿ ತಮ್ಮ ಜಾತಿಯ ಲೇಬಲ್ ಮೇಲೆ ಆರಿಸಿ ಬರಲಿ ನೋಡೋಣ ಎಂದು ಎಂ.ಬಿ.ಪಾಟೀಲ್​ ಹಾಗೂ ಮಾಜಿ ಶಾಸಕ ನಾಡಗೌಡ ಸವಾಲು ಹಾಕಿದರು.

ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್

ಮುದ್ದೇಬಿಹಾಳ:ಸಚಿವ ಕಾರಜೋಳರು ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ಕೊಡದಿರುವುದರಿಂದ ಲಿಂಗಾಯತ ರೆಡ್ಡಿ ಸಮಾಜಕ್ಕೆ ಬಹಳ ದೊಡ್ಡ ಅನ್ಯಾಯ ಆದಂತಾಗಿದೆ ಎಂದು ಹೇಳಿರುವುದು ರೆಡ್ಡಿ ಸಮುದಾಯದ ಮತಗಳನ್ನು ಗಳಿಸುವ ಸಹಾನುಭೂತಿಯೇ ಹೊರತು ಬೇರೇನೂ ಅಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್‌ನವರಾದ ನಾವು ಪಕ್ಷದ ಆಧಾರದ ಮೇಲೆ ಚುನಾವಣೆ ಮಾಡುತ್ತೇವೆಯೇ ಹೊರತು ಜಾತಿ ಆಧಾರದ ಮೇಲೆ ಚುನಾವಣೆ ಮಾಡುವುದಿಲ್ಲ. ಕಾರಜೋಳರು ಇದನ್ನು ಅರಿತುಕೊಳ್ಳಬೇಕು. ಕಾರಜೋಳರು ತಮ್ಮ ಪಕ್ಷದ ಲೇಬಲ್ ತೆಗೆದು ಹಾಕಿ ತಮ್ಮ ಜಾತಿಯ ಲೇಬಲ್ ಮೇಲೆ ಆರಿಸಿ ಬರಲಿ ನೋಡೋಣ ಎಂದು ಎಂ.ಬಿ.ಪಾಟೀಲ್​ ಹಾಗೂ ಮಾಜಿ ಶಾಸಕ ನಾಡಗೌಡ ಸವಾಲು ಹಾಕಿದರು.

ಕಾಂಗ್ರೆಸ್​ ನಾಯಕರ ಸವಾಲು

ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂ ಬಿ ಪಾಟೀಲ್​​, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ಅವರು ಕಾಂಗ್ರೆಸ್ ಅನ್ನು ಗುಂಡಾ ಸಂಸ್ಕೃತಿಗೆ ಹೋಲಿಸಿದ್ದಾರಲ್ಲ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಂಬಿಪಿ ಅವರು, ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್ ಪಕ್ಷ. ರವಿಕುಮಾರ ಮತ್ತಿತರರು ಆಗ ಸ್ವಾತಂತ್ರ್ಯ ಹೋರಾಟದಲ್ಲಿರಲಿಲ್ಲ. ರವಿಕುಮಾರಗೆ ಮಾತನಾಡಲು ಅವಕಾಶ ಸಿಕ್ಕಿದ್ದೇ ಕಾಂಗ್ರೆಸ್‌ನಿಂದ ಎಂದರು.

ಯಡಿಯೂರಪ್ಪ ಅವರನ್ನ ಕಡೆಗಣಿಸಿದ್ದು ಎದ್ದು ಕಾಣ್ತಿದೆ

ಯಡಿಯೂರಪ್ಪ ವಯಸ್ಸಿನ ಕಾರಣ ನೀಡಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬಿಜೆಪಿ ವರಿಷ್ಠರು ಕೇರಳದಲ್ಲಿ 85 ವಯಸ್ಸಿನವರನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಎಷ್ಟು ಸರಿ. ಇದರಿಂದಲೇ ಯಡಿಯೂರಪ್ಪಗೆ ಆಗಿರುವ ಅನ್ಯಾಯ ಅರ್ಥ ಆಗುತ್ತದೆ ಎಂದು ಎಂಬಿಪಿ ಹೇಳಿದರು.

ಮಾಜಿ ಶಾಸಕ ನಾಡಗೌಡರು ಮಾತನಾಡಿ, ಒಬ್ಬರಿಗೆ ಮಾತ್ರ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್‌ನ ಹಿರಿಯರಾದ ಎಸ್.ಆರ್.ಪಾಟೀಲ್​​ ಕೇಳಿದ್ದರು. ನಾವು ಎಸ್‌ಆರ್‌ಪಿ ಮತ್ತು ಸುನೀಲಗೌಡ ಇಬ್ಬರಿಗೂ ಟಿಕೆಟ್ ಕೊಡುವಂತೆ ಕೇಳಿದ್ದೆವು. ಹಿಂದೆ ಎಸ್‌ಆರ್‌ಪಿ ಮತ್ತು ಸಿದ್ದು ನ್ಯಾಮಗೌಡರು ಆರಿಸಿ ಬಂದಿದ್ದರು.

ಈಗಲೂ ನಾವು ನಿಮ್ಮನ್ನು ಆರಿಸಿ ತರುತ್ತೇವೆ ಎಂದಿದ್ದೆವು. ಆದರೆ, ಕೊನೇ ಕ್ಷಣದಲ್ಲಿ ಎಸ್‌ಆರ್‌ಪಿ ಅವರು ಒಬ್ಬರಿಗೆ ಮಾತ್ರ ಟಿಕೆಟ್ ಕೊಡಿ, ನಾನು ಹಿಂದೆ ಸರಿಯುತ್ತೇನೆ. ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿ ಸ್ವ ಇಚ್ಚೆಯಿಂದ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದರು.

ಕಾರಜೋಳರು ರೆಡ್ಡಿಗಳ ಅನುಕಂಪ ಗಿಟ್ಟಿಸಲು ಹೊರಟಿದ್ದಾರೆ

ಇದನ್ನು ಅರಿಯದೇ ಸ್ಥಳೀಯ ಸಂಸ್ಥೆಯ ವಿಧಾನಪರಿಷತ್ ಚುನಾವಣೆಯ ಟಿಕೆಟ್ ಎಸ್.ಆರ್.ಪಾಟೀಲ್​​ ಅವರ ಕೈ ತಪ್ಪಿದ್ದು ಲಿಂಗಾಯತ ರೆಡ್ಡಿ ಸಮಾಜಕ್ಕೆ ಬಹಳ ದೊಡ್ಡ ಅನ್ಯಾಯ ಆದಂತಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿ ರೆಡ್ಡಿಗಳ ಅನುಕಂಪ ಗಿಟ್ಟಿಸಲು ಹೊರಟಿದ್ದಾರೆ ಎಂದು ಕಾರಜೋಳ ಅವರಿಗೆ ಟಾಂಗ್ ನೀಡಿದ್ದಾರೆ.

ರಾಜಕಾರಣ ಬಹಳ ಮಜಾ ಇದೆ. ನಾವು ಸಮಾಜ ಎಂದು ಚುನಾವಣೆ ಮಾಡೊಲ್ಲ. ಪಕ್ಷ ಎಂದು ಚುನಾವಣೆ ಮಾಡ್ತೇವೆ. ಬಾಗಲಕೋಟ ಭಾಗದಲ್ಲಿ ರಡ್ಡಿ ಸಮಾಜದವರು ಬಹಳ ಇದ್ದಾರೆ. ಸಿಂಪತಿ ಕ್ರಿಯೇಟ್ ಮಾಡಲು ಕಾರಜೋಳರು ಆ ಮಾತನ್ನು ಹೇಳಿರಬಹುದು ಎಂದು ನಗುತ್ತಲೇ ಎಂ ಬಿ ಪಾಟೀಲ್​​​ ಮಾತು ತೇಲಿಸಿದರು.

ಇದನ್ನೂ ಓದಿ : ಕೋವಿಡ್​​ ರೂಪಾಂತರಿ Omicron​ ಭೀತಿ: ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

ABOUT THE AUTHOR

...view details