ಕರ್ನಾಟಕ

karnataka

ETV Bharat / state

ಪಟಾಕಿ ನಿಷೇಧ.. ಸರ್ಕಾರದ ವಿರುದ್ಧ ಶಾಸಕ ಯತ್ನಾಳ್ ಕಿಡಿ - Basavanagowda patil yatnal latest news

ಫೇಸ್‌ಬುಕ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂಗಳು ದೀಪಾವಳಿ, ನವರಾತ್ರಿ, ಗಣೇಶ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುತ್ತಾರೆ. ಆಗೆಲ್ಲ ಶಬ್ಧ ರಹಿತ ದೀಪಾವಳಿ, ಪರಿಸರ ಸ್ನೇಹಿ ಗಣೇಶೋತ್ಸವ ಎಂದೆಲ್ಲ ಬೋಧನೆ ಮಾಡಲಾಗುತ್ತದೆ..

Basavanagowda patil yatnal
ಪಟಾಕಿ ನಿಷೇಧ: ಸರ್ಕಾರದ ವಿರುದ್ಧ ಶಾಸಕ ಯತ್ನಾಳ ಸಿಡಿಮಿಡಿ

By

Published : Nov 9, 2020, 12:51 PM IST

ವಿಜಯಪು ರ: ಕೊರೊನಾ ಹರಡುವ ಭೀತಿ ಹಿನ್ನೆಲೆ ಸರ್ಕಾರ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಮುಂದಾಗುತ್ತಿದ್ದಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್​​​​ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ಪಟಾಕಿ ನಿಷೇಧ.. ಸಾಮಾಜಿಕ ಜಾಲತಾಣದ ಮೂಲಕ ಯತ್ನಾಳ್ ಕಿಡಿ

ಫೇಸ್‌ಬುಕ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂಗಳು ದೀಪಾವಳಿ, ನವರಾತ್ರಿ, ಗಣೇಶ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುತ್ತಾರೆ. ಆಗೆಲ್ಲ ಶಬ್ಧ ರಹಿತ ದೀಪಾವಳಿ, ಪರಿಸರ ಸ್ನೇಹಿ ಗಣೇಶೋತ್ಸವ ಎಂದೆಲ್ಲ ಬೋಧನೆ ಮಾಡಲಾಗುತ್ತದೆ. ಇದೇ ರೀತಿ ರಕ್ತರಹಿತ ಬಕ್ರೀದ್, ನಿಶಬ್ಧ ಶುಕ್ರವಾರ, ಪಟಾಕಿ ಇಲ್ಲದ ಡಿಸೆಂಬರ್ 31ರ ರಾತ್ರಿ ಜಾರಿಗೆ ಬರಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಯತ್ನಾಳ್ ಕಿಡಿ ಕಾರಿದ್ದಾರೆ.

ಇನ್ನು ಧ್ವನಿವರ್ಧಕ ಬಳಸಿ ಕೂಗುವುದು, ರಸ್ತೆಯಲ್ಲಿ ಸಾಮೂಹಿಕ ನಮಾಜ್​ ಮಾಡುವುದು ಬೇಡ. ನಾವು ಮನೆಯಲ್ಲೇ ದೀಪ ಬೆಳಗಿಸುತ್ತೇವೆ. ಧ್ವನಿವರ್ಧಕ ಬಳಸದೇ ನಮಾಜ್​ ಮಾಡಲಿ. ರಸ್ತೆಯಲ್ಲಿ ಬೇಡ ಎಂಬ ಪೋಸ್ಟ್ ಹರಿ ಬಿಡುವ ಮೂಲಕ ದೀಪಾವಳಿ ಪಟಾಕಿ ನಿಷೇಧಕ್ಕೆ ಶಾಸಕ ಯತ್ನಾಳ್ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ABOUT THE AUTHOR

...view details