ಕರ್ನಾಟಕ

karnataka

ETV Bharat / state

ಬೇಕರಿಯಲ್ಲಿ ಬೆಂಕಿ, ಉಸಿರುಗಟ್ಟಿ ಮಾಲೀಕ ಸಾವು - Kannada news

ರಾತ್ರಿ ವೇಳೆ ಬೇಕರಿಗೆ ಪೂಜೆ ಮಾಡಿ ದೀಪ ಹಚ್ಚಿಟ್ಟು, ಮಾಲೀಕ ಅಲ್ಲಿಯೇ ಮಲಗಿದ್ದರು. ಆದ್ರೆ, ರಾತ್ರಿ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದೆ. ಬೇಕರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ರೋಲಿಂಗ್‌ ಶಟರ್ ಮುರಿದು ಮಾಲೀಕರನ್ನು ಹೊರಗೆ ಕರೆದಾಗ, ಅವರು ಉಸಿರುಗಟ್ಟಿ ಮೃತಪಟ್ಟಿದ್ದು ಗಮನಕ್ಕೆ ಬಂದಿದೆ.

ಆಕಸ್ಮಿಕವಾಗಿ ಬೇಕರಿಗೆ ಬೆಂಕಿ

By

Published : Jun 4, 2019, 12:22 PM IST

ವಿಜಯಪುರ : ಆಕಸ್ಮಿಕವಾಗಿ ಬೇಕರಿಯೊಂದಕ್ಕೆ ಬೆಂಕಿ ತಗಲಿದ ಪರಿಣಾಮ ಮಾಲೀಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಮಾಧವರಾವ ಚೌಧರಿ (35) ಮೃತ್ರ ದುರ್ದೈವಿ.

ಮಾಧವರಾವ ಚೌಧರಿ, ನಗರದಲ್ಲಿ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ರಾತ್ರಿ ಬೇಕರಿಯಲ್ಲಿ ಪೂಜೆ ಮಾಡಿ ದೀಪ ಹಚ್ಚಿಟ್ಟು ತಾನೂ ಅಲ್ಲಿಯೇ ಮಲಗಿದ್ದು ಬೆಂಕಿ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಬೇಕರಿಗೆ ಬೆಂಕಿ

ಬೇಕರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ರೋಲಿಂಗ್‌ ಶಟರ್ ಮುರಿದು ಮಾಲೀಕರನ್ನು ಹೊರಗೆ ಕರೆದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.

ABOUT THE AUTHOR

...view details