ವಿಜಯಪುರ: ಇಂದು ಬೆಳಗ್ಗೆ ಜಿಲ್ಲೆಯ ನಿಡಗುಂದಿ ಪಟ್ಟಣದ ಕೂಡಗಿ ವಿದ್ಯುತ್ (ಎನ್‌ಟಿಪಿಸಿ) ಉಷ್ಣ ವಿದ್ಯುತ್ ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಲ್ಲಿದ್ದಲು ಸಾಗಾಣಿಕೆ ಯಂತ್ರ ಚಾಲನೆಯಲ್ಲಿರುವಾಗ ಬೇರಿಂಗ್ ತಿರುಗುತ್ತಾ ಶಾಖೋತ್ಪನ್ನಗೊಂಡು ರಬ್ಬರ್ ಬೆಲ್ಟ್ಗೆ ತಾಕಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಎನ್‌ಟಿಪಿಸಿ ಮೂಲಗಳು ತಿಳಿಸಿವೆ.
ವಿಜಯಪುರದ ಎನ್‌ಟಿಪಿಸಿ ಘಟಕದಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ಅನಾಹುತ
ಕಲ್ಲಿದ್ದಲು ಸಾಗಣೆ ಯಂತ್ರ ಚಾಲನೆಯಲ್ಲಿರುವಾಗ ಬೇರಿಂಗ್ ತಿರುಗುತ್ತಾ ಶಾಖೋತ್ಪನ್ನ ಗೊಂಡು ರಬ್ಬರ್ ಬೆಲ್ಟ್ ಗೆ ತಾಕಿ ಬೆಂಕಿ ಹೊತ್ತಿಕೊಂಡ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಕೂಡಗಿ ಎನ್‌ಟಿಪಿಸಿ ಸ್ಥಾವರದಲ್ಲಿ ನಡೆದಿದೆ.
ಎನ್‌ಟಿಪಿಸಿ ಘಟಕದಲ್ಲಿ ಅಗ್ನಿ ಅವಘಡ
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:51 ಟ್ರ್ಯಾಕ್ಟರ್ಗಳಲ್ಲಿ ಅತ್ತೆ ಮನೆಗೆ ದಿಬ್ಬಣ ಬಂದ ರೈತನ ಮಗ... ಅಳಿಯ ಬಂದ ದಾರಿ ಬಿಡಿ!