ವಿಜಯಪುರ:ಸಾಲಬಾಧೆ ತಾಳಲಾರದೆ ಇಂಡಿ ತಾಲೂಕಿನ ತಡವಲಗಾ ಗ್ರಾಮದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ - ಸಾಲಬಾದೆ
ಸಾಲಬಾಧೆ ತಾಳಲಾರದೆ ಇಂಡಿ ತಾಲೂಕಿನ ತಡವಲಗಾ ಗ್ರಾಮದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
farmer-commits-suicide-by-consuming-poison
ಅಣ್ಣಾರಾಯ ಮಳಸಿದ್ದಪ್ಪ ಖಸ್ಕಿ (57) ಆತ್ಮಹತ್ಯೆ ಮಾಡಿಕೊಂಡ ರೈತ ಎನ್ನಲಾಗಿದೆ. ಈತ ಇಂಡಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹ 75 ಸಾವಿರ ಹಾಗೂ ತಡವಲಗಾ ಗ್ರಾಮದ ಪಿಕೆಪಿಎಸ್‌ನಲ್ಲಿ ₹ 35 ಸಾವಿರ ಸೇರಿದಂತೆ ಒಟ್ಟು ₹ 1.10 ಲಕ್ಷ ಸಾಲ ಪಡೆದಿದ್ದ ಎನ್ನಲಾಗಿದೆ.
ಇತ್ತ 4.10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಜ್ಜೆಯೂ ಕೈ ಕೊಟ್ಟಿತ್ತು. ಇದರಿಂದಾಗಿ ಮನನೊಂದ ಅಣ್ಣಾರಾಯ ಶುಕ್ರವಾರ ತಡರಾತ್ರಿ ವಿಷ ಸೇವಿಸಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.