ಮುದ್ದೇಬಿಹಾಳ (ವಿಜಯಪುರ): ನಮ್ಮ ತಂದೆ ನಾವು ಬೆಳಗ್ಗೆ ಏಳುವುದರಲ್ಲಿಯೇ ಡ್ಯೂಟಿಗೆ ಹೋಗಿರುತ್ತಾರೆ. ಸಂಜೆ ಮಲಗಿದ ಬಳಿಕ ಮನೆಗೆ ಬರುತ್ತಾರೆ. ಅವರ ಮುಖ ನೋಡಲು ನಮಗೆ ಸಿಗುವುದಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕುಟುಂಬದ ನಿರ್ವಹಣೆಗೆ ವೇತನ ಸಾಲುತ್ತಿಲ್ಲ, ನಮ್ಮ ಕಷ್ಟ ಏನು ಅಂತ ಗೊತ್ತಾಗಬೇಕು ಅಂದ್ರೆ ನೀವು ಬೀದಿಗೆ ಬಂದು ನೋಡ್ರಿ ಅಂತ ಸಾರಿಗೆ ನೌಕರನ ಪುತ್ರಿಯೊಬ್ಬಳು ಡಿಸಿಎಂ ಸವದಿಗೆ ಸವಾಲೆಸಿದಿದ್ದಾಳೆ.
ಫೀಸ್ ಕಟ್ಟಲು ತೊಂದರೆಯಾಗಿದೆ. ನಿತ್ಯವೂ ಊಟ ಮಾಡಲು ನಿಗಮದಿಂದ ಕೊಡುತ್ತಿರುವ ಸಂಬಳ ಸಾಕಾಗುತ್ತಿಲ್ಲ. ಮಂತ್ರಿಗಳು ಎಸಿ ರೂಂ, ಕಾರ್‌ನಲ್ಲಿ ಅಡ್ಡಾಡುತ್ತೀರಿ. ಆದರೆ, ಒಂದು ದಿನ ಸಾಮಾನ್ಯ ಸಾರಿಗೆ ಬಸ್‌ನ ಚಾಲಕರಂತೆ ಸೇವೆ ಮಾಡಿ ನೋಡಿ ಅವರ ಕಷ್ಟ ಏನೆಂಬುದು ತಿಳಿಯುತ್ತದೆ ಎಂದಿದ್ದಾಳೆ.