ಕರ್ನಾಟಕ

karnataka

ETV Bharat / state

ಹಗಲಿನಲ್ಲಿ ಉರಿಯುತ್ತಿರುವ ವಿದ್ಯುತ್ ದೀಪಗಳು: ಅಧಿಕಾರಿಗಳ ನಿರ್ಲಕ್ಷ್ಯ ಆಕ್ರೋಶ

ರಸ್ತೆಯ ಬದಿಯ ವಿದ್ಯುತ್ ದೀಪಗಳು ಹಗಲಿನಲ್ಲಿ ಉರಿಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಜವಾಬ್ದಾರಿಯುತ ಅಧಿಕಾರಿಗಳು ಪೋಲಾಗುತ್ತಿರುವ ವಿದ್ಯುತ್​ಅನ್ನು ತಡೆಗಟ್ಟಬೇಕು ಎಂದಿದ್ದಾರೆ.

ಹಗಲಿನಲ್ಲಿ ಉರಿಯುತ್ತಿರುವ ವಿದ್ಯುತ್ ದೀಪಗಳು

By

Published : Apr 25, 2019, 6:46 PM IST

ವಿಜಯಪುರ: ಜಿಲ್ಲೆಯಲ್ಲಿ ವಿದ್ಯುತ್​ ಕೊರತೆ ಸಾಮಾನ್ಯವಾಗಿಟ್ಟಿದೆ. ಆದಾಗ್ಯೂ ರಾತ್ರಿ ಸಾಲದೆಂಬಂತೆ ಹಗಲಿನಲ್ಲಿಯೂ ರಸ್ತೆಯ ಬದಿಯ ವಿದ್ಯುತ್ ದೀಪಗಳು ಉರಿಯುತ್ತಿವೆ ಎಂದು ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಗಲಿನಲ್ಲಿ ಉರಿಯುತ್ತಿರುವ ವಿದ್ಯುತ್ ದೀಪಗಳು

ಮುದ್ದೇಬಿಹಾಳ ತಾಲೂಕಿನ ಕೆಲವು ವಾರ್ಡ್​ಗಳಲ್ಲಿ ಸಂಜೆವರೆಗೂ ವಿದ್ಯುತ್​ ದೀಪಗಳು ಉರಿಯುತ್ತಲೇ ಇರುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಯಾರೂ ಗಮನ ಹರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಅಂತ ತಾಲೂಕಿನ ಜನರು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಜವಾಬ್ದಾರಿಯುತ ಅಧಿಕಾರಿಗಳು ಪೋಲಾಗುತ್ತಿರುವ ವಿದ್ಯುತ್​ಅನ್ನು ತಡೆಗಟ್ಟಬೇಕು. ಅಲ್ಲದೆ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details